ಹುಬ್ಬಳ್ಳಿ: ನಗರದ ಹೊಸೂರಿನ ಪಾರಿಜಾತ ರೆಸಿಡೆನ್ಸಿಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ವಿದ್ಯಾನಗರ ಠಾಣೆ ಪೊಲೀಸರು, ಶನಿವಾರ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಹಾಸನದ ಗಣೇಶ ಹೊನ್ನೇಗೌಡ, ಕಾರವಾರದ ಭಾಸ್ಕರ ನಾಯ್ಕ, ಹಾವೇರಿಯ ಮಹೇಶಪ್ಪ ಕುಪ್ಪೇಲೂರು, ಮೈಸೂರಿನ ರವಿ ಎಸ್. ಮತ್ತು ತುಮಕೂರಿನ ರವಿಕುಮಾರ ಕೆ., ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಮತ್ತೊಬ್ಬ ಆರೋಪಿ ಹರೀಶ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಸಾರ್ವಜನಿಕ ಆಸ್ಪತ್ರೆಗಳಿಗೆ ತಮಿಳುನಾಡು ಸರ್ಕಾರ ಪೂರೈಸುವ ಕಾಂಡೋಮ್‌ಗಳು ಸಾವಿರಾರು ಸಂಖ್ಯೆಯಲ್ಲಿ ದಾಳಿ ವೇಲೆ ಪತ್ತೆಯಾಗಿವೆ. ಹೊರ ರಾಜ್ಯದಿಂದ ಕರ್ನಾಟಕಕ್ಕೆ ಅಷ್ಟೊಂದು ಪ್ರಮಾಣದಲ್ಲಿ ಕಾಂಡೋಮ್‌ಗಳು ಹೇಗೆ ಪೂರೈಕೆಯಾಗಿವೆ? ಅದರ ಹಿಂದೆ ಯಾರಿದ್ದಾರೆ? ಎನ್ನುವ ಕುರಿತು ತನಿಖೆ ಆರಂಭವಾಗಿದೆ. ಬಂಧಿತ ಆರೋಪಿಗಳೆಲ್ಲ ಬೇರೆ ಜಿಲ್ಲೆಯವರಾಗಿರುವುದರಿಂದ, ಅವರ ಸಂಪರ್ಕದಲ್ಲಿದ್ದವರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ದಾಳಿ ಸಂದರ್ಭ ಕೆಲವು ಮಹತ್ವದ ದಾಖಲೆಗಳು ಸಿಕ್ಕಿದ್ದು, ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಒಡನಾಡಿ ಸಂಸ್ಥೆ ನೀಡಿದ ಮಾಹಿತಿ ಆಧರಿಸಿ ಪೊಲೀಸರು ಶುಕ್ರವಾರ ಪಾರಿಜಾತ ರೆಸಿಡೆನ್ಸಿ ಮೇಲೆ ದಾಳಿ ನಡೆಸಿದ್ದರು.
ತಾಲ್ಲೂಕಿನ ವಿವಿಧೆಡೆ ಮನೆಗಳ ಬಾಗಿಲಿನ ಬೀಗ ಮುರಿದು ಚಿನ್ನಾಭರಣ, ನಗದು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಗ್ರಾಮೀಣ ಠಾಣೆ ಪೊಲೀಸರು, ₹9 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಕುಂದಗೋಳ ತಾಲ್ಲೂಕಿನ ಗುಡಗೇರಿ ಗ್ರಾಮದ ಶ್ರೀಧರ ಬಿಂಜಡಗಿ, ಹೇಮಂತ ಧರೆಣ್ಣವರ ಮತ್ತು ಗೆಬಿ ಫರ್ನಾಂಡೀಸ್ ಬಂಧಿತರು.
ಆರೋಪಿಗಳು ತಾಲ್ಲೂಕಿನ ತಾರಿಹಾಳ ಗ್ರಾಮದ ಸೈದುಸಾಬ ನದಾಫ್, ಅಂಚಟಗೇರಿ ಗ್ರಾಮದ ಗೋಡಾವನ್ ಆಶ್ರಯ ಬಡಾವಣೆಯಲ್ಲಿನ ಮಂಜುನಾಥ ಜಗಲಾರ ಅವರ ಮನೆಯಲ್ಲಿ ಕಳವು ಮಾಡಿದ್ದರು. ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇನ್‌ಸ್ಪೆಕ್ಟರ್ ಮುರಗೇಶ ಚನ್ನಣ್ಣವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದೆ. ಪಿಎಸ್ಐ ಸಚಿನ್ ಆಲಮೇಲಕರ್, ಎಎಸ್ಐ ಎನ್.ಎಂ. ಹೊನ್ನಪ್ಪನವರ, ಸಿಬ್ಬಂದಿ ಎ.ಎ. ಕಾಕರ್, ಎಚ್.ಬಿ . ಐಹೋಳೆ, ಎಚ್.ಎಲ್. ಮಲ್ಲಿಗವಾಡ, ಸಂತೋಷ ಚವಾಣ, ಚನ್ನಪ್ಪ ಬಳ್ಕೊಳ್ಳಿ, ಮಹಾಂತೇಶ ಮದ್ದಿನ್, ಗಿರೀಶ ತಿಪ್ಪಣ್ಣವರ, ವಿಶ್ವನಾಥ ಬಡಿಗೇರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.