ADVERTISEMENT

ತಾಳಿ ಕಟ್ಟುವ ವೇಳೆ ಮದುವೆ ಬೇಡ ಎಂದ ವಧು! ಕಂಗಾಲಾದ ವರ; ಮುರಿದು ಬಿದ್ದ ವಿವಾಹ

ಮದುವೆ ಬೇಡ ಎಂದ ಮಗಳನ್ನು ಅವರ ಪೋಷಕರು ಪರಿಪರಿಯಾಗಿ ಬೇಡಿಕೊಂಡಿರೂ, ಆದರೆ ಮಗಳು ನಿರ್ಧಾರ ಬದಲಿಸಲಿಲ್ಲ. ಮಗಳ ನಿರ್ಧಾರದಿಂದ ಆಘಾತಗೊಂಡ ಪೋಷಕರು ಕಣ್ಣೀರಿಟ್ಟರು.

​ಪ್ರಜಾವಾಣಿ ವಾರ್ತೆ
Published 23 ಮೇ 2025, 7:55 IST
Last Updated 23 ಮೇ 2025, 7:55 IST
<div class="paragraphs"><p>ತಾಳಿ ಕಟ್ಟುವ ವೇಳೆ ಮದುವೆ ಬೇಡ ಎಂದ ವಧು! ಕಂಗಾಲಾದ ವರ; ಮುರಿದು ಬಿದ್ದ ವಿವಾಹ</p></div>

ತಾಳಿ ಕಟ್ಟುವ ವೇಳೆ ಮದುವೆ ಬೇಡ ಎಂದ ವಧು! ಕಂಗಾಲಾದ ವರ; ಮುರಿದು ಬಿದ್ದ ವಿವಾಹ

   

ಹಾಸನ: ಮುಹೂರ್ತದ ವೇಳೆ ವಧು ನಿರಾಕರಿಸಿದ್ದರಿಂದ ನಗರದ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಬೆಳಿಗ್ಗೆ ಏರ್ಪಡಿಸಿದ್ದ ಮದುವೆಯೊಂದು ಮುರಿದು ಬಿದ್ದಿದೆ. ಇನ್ನೊಬ್ಬನ ಜೊತೆ ಪ್ರೀತಿಸುತ್ತಿದ್ದು, ಆತನನ್ನೆ ಮದುವೆ ಮಾಡಿಕೊಳ್ಳುವುದಾಗಿ ಕೊನೆಯ ಕ್ಷಣದಲ್ಲಿ ಮದುಮಗಳು ಹೇಳಿದ್ದು, ವರ ಮತ್ತು ವಧುವಿನ ಪಾಲಕರಿಗೆ ದಿಕ್ಕು ತೋಚದಂತಾಗಿತ್ತು.

ಮಂತ್ರಘೋಷಗಳು, ಗಟ್ಟಿ ಮೇಳ ಮೊಳಗುತ್ತಿದ್ದಂತೆ ವರ ತಾಳಿ ಹಿಡಿದು ಕಟ್ಟಲು ಸಜ್ಜಾಗಿದ್ದರು. ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ‘ಈ ಮದುವೆ ಬೇಡ’ ಎಂದ ವಧು ಪಟ್ಟು ಹಿಡಿದರು. ತಾಳಿ ಕಟ್ಟುವ ಕೆಲವೇ ಕ್ಷಣಗಳ ಮೊದಲು ಪ್ರಿಯಕರನ ಮೊಬೈಲ್‌ ಕರೆ ಬಂದಿದ್ದು, ವಧು ಮದುವೆಗೆ ನಿರಾಕರಿಸಿದರು.

ADVERTISEMENT

ಈ ವೇಳೆ ‘ನಿಜವಾಗಿಯೂ ಮದುವೆ ಇಷ್ಟವಿದೆಯಾ’ ಎಂದು ವರ ಕೂಡ ಹಲವಾರು ಬಾರಿ ಪ್ರಶ್ನಿಸಿದ್ದಾರೆ. ಆದರೆ, ತನಗೆ ಮದುವೆ ಇಷ್ಟವಿಲ್ಲ ಎಂದು ಮದುಮಗಳು ಹೇಳಿದ್ದಾರೆ. ಹುಡುಗಿಯ ಪೋಷಕರು, ಬೆದರಿಸಿ ಮದುವೆ ಮಾಡುವ ಪ್ರಯತ್ನ ಮಾಡಿದ್ದಾರೆ. ಆಗ, ‘ನಾನು ಬೇರೊಬ್ಬ ಹುಡುಗನ ಪ್ರೀತಿಸುತ್ತಿರುವುದಾಗಿ’ ಮದುಮಗಳು ಹೇಳಿದ್ದಾಳೆ.

ಮದುವೆ ಬೇಡ ಎಂದು ಹಸಮಣೆಯಿಂದ ಎದ್ದ ವಧು ನೇರವಾಗಿ ಕಲ್ಯಾಣ ಮಂಟಪದಿಂದ ಕಾರಿನ ಮೂಲಕ ಹೊರಗೆ ತೆರಳಿದ್ದಾರೆ. ಎರಡೂ ಕುಟುಂಬಗಳ ನಡುವೆ ಗಲಾಟೆ ನಡೆದಿದ್ದು, ಬಡಾವಣೆ ಹಾಗೂ ನಗರಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಕಣ್ಣೀರಿಟ್ಟ ಪೋಷಕರು: ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕರಾಗಿರುವ ವರನ ಕಡೆಯವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅದ್ದೂರಿ ಮದುವೆಗೆ ವ್ಯವಸ್ಥೆ ಮಾಡಿದ್ದರು. ಬಂಧು ಬಳಗ, ಆಪ್ತರನ್ನೂ ಆಹ್ವಾನಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಈ ಘಟನೆ ನಡೆದಿದ್ದು, ವರ ಸೇರಿದಂತೆ ಅವರ ಕುಟುಂಬಸ್ಥರು ಕಣ್ಣೀರಿಡುತ್ತಿದ್ದರು.

ಮದುವೆ ಬೇಡ ಎಂದ ಮಗಳನ್ನು ಅವರ ಪೋಷಕರು ಪರಿಪರಿಯಾಗಿ ಬೇಡಿಕೊಂಡಿರೂ, ಆದರೆ ಮಗಳು ನಿರ್ಧಾರ ಬದಲಿಸಲಿಲ್ಲ. ಮಗಳ ನಿರ್ಧಾರದಿಂದ ಆಘಾತಗೊಂಡ ಪೋಷಕರು ಕಣ್ಣೀರಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.