ಹಳೇಬೀಡು: ಜಾವಗಲ್‌ನಿಂದ ಪುಷ್ಪಗಿರಿ ಕ್ಷೇತ್ರಕ್ಕೆ ಸೋಮವಾರ 800 ಭಕ್ತರು ಪಾದಯಾತ್ರೆ ನಡೆಸಿದರು.
ಬಿಸಿಲಿನ ತಾಪದಲ್ಲಿಯೂ ಭಕ್ತರು ಶ್ರದ್ಧಾಭಕ್ತಿಯಿಂದ ಕಾಲ್ನಡಿಗೆಯಲ್ಲಿ ತೆರಳಿ ದೇವರ ದರ್ಶನ ಪಡೆದರು. ಕೆಲವರು ಭಜನೆ ಮಾಡುತ್ತಾ ಸಾಗಿದರು. ಪುಷ್ಪಗಿರಿ ಬೆಟ್ಟದ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ, ಅದಿಯೋಗಿ ಶಿವನ ಪ್ರತಿಮೆ, 108 ಶಿವಲಿಂಗ ಹಾಗೂ ಗುರು ಕುರಿ ಬಸವೇಶ್ವರ ಅಜ್ಜಯ್ಯ ಮಂದಿರವನ್ನು ಭಕ್ತರು ವೀಕ್ಷಿಸಿದರು.
ದೇವಾಲಯದಲ್ಲಿ ಪಾದಯಾತ್ರಿಗಳಿಗಾಗಿ ವಿಶೇಷ ಪೂಜೆ ನಡೆಯಿತು. ಶ್ರೀಮಠದ ಆಡಿಟೊರಿಯಂನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಪಾದಯಾತ್ರೆಯಿಂದ ದೇಹ ಹಾಗೂ ಮನಸ್ಸು ಪರಿಶುದ್ಧವಾಗುತ್ತದೆ’ ಎಂದರು.
ಸೋಮವಾರ 7ನೇ ವರ್ಷದ ಪಾದಯಾತ್ರೆ ಸಮಾಪ್ತಿಯಾಯಿತು.
ಬ್ರಹ್ಮ ಕುಮಾರಿಯರಾದ ಭಾಗ್ಯಕ್ಕ, ಆಶಕ್ಕ, ಲೀಲಕ್ಕ, ಕಳಸಾಪುರ ಸುರೇಶ್, ಸತ್ಯನಾರಾಯಣ ಚಂದ್ರಣ್ಣ, ಉದಯ, ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ವಿನುತ ಧನಂಜಯ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.