ADVERTISEMENT

ರಾಣೆಬೆನ್ನೂರು | ನಿರಂತರ ಮಳೆ: ಬೆಳ್ಳುಳ್ಳಿ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 3:52 IST
Last Updated 1 ಸೆಪ್ಟೆಂಬರ್ 2025, 3:52 IST
ರಾಣೆಬೆನ್ನೂರು ತಾಲ್ಲೂಕಿನ ಮುಷ್ಟೂರು ಗ್ರಾಮದಲ್ಲಿ ಬೆಳೆದ ಬೆಳ್ಳುಳ್ಳಿ ಬೆಳೆ ನಿರಂತರ ಮಳೆಗೆ ಕೊಳೆತಿರುವುದನ್ನು ರೈತರು ತೋರಿಸಿದರು
ರಾಣೆಬೆನ್ನೂರು ತಾಲ್ಲೂಕಿನ ಮುಷ್ಟೂರು ಗ್ರಾಮದಲ್ಲಿ ಬೆಳೆದ ಬೆಳ್ಳುಳ್ಳಿ ಬೆಳೆ ನಿರಂತರ ಮಳೆಗೆ ಕೊಳೆತಿರುವುದನ್ನು ರೈತರು ತೋರಿಸಿದರು   

ರಾಣೆಬೆನ್ನೂರು: ತಾಲ್ಲೂಕಿನಾಧ್ಯಂತ ಬೆಳೆದ ಬೆಳ್ಳುಳ್ಳಿ ಬೆಳೆ ಈಗ ನಿರಂತರ ಮಳೆಗೆ ತೇವಾಂಶ ಹೆಚ್ಚಾಗಿ ಹೊಲದಲ್ಲೇ ಕೊಳೆಯುವ ಪರಿಸ್ಥಿತಿ ಉಂಟಾಗಿದೆ. ಅಪಾರ ಖರ್ಚು ಮಾಡಿ ಮೂರೂವರೆ ತಿಂಗಳು ಶಿಶುವಿನಂತೆ ಜೋಪಾನ ಮಾಡಿದ್ದ ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.

ಕೂಡಲೇ ಸರ್ಕಾರ ಬೆಳ್ಳುಳ್ಳಿ ಬೆಳೆ ಬೆಳೆದು ಹಾನಿಗೊಂಡ ರೈತರಿಗೆ ವೈಜ್ಞಾನಿಕ ಮಾದರಿಯಲ್ಲಿ ಕ್ವಿಂಟಲ್‌ಗೆ ₹ 25 ಸಾವಿರ ಪರಿಹಾರ ವಿತರಿಸಬೇಕು ಎಂದು ರೈತರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ತಾಲ್ಲೂಕಿನ ಹಲಗೇರಿ, ಆಲದಕಟ್ಟಿ, ಇಟಗಿ, ಮಾಗೋಡ, ಅಂತರವಳ್ಳಿ, ಎರೇಕುಪ್ಪಿ, ನಂದಿಹಳ್ಳಿ, ಲಿಂಗದಹಳ್ಳಿ, ಎಣ್ಣಿ ಹೊಸಳ್ಳಿ, ಉಕ್ಕುಂದ, ಸರವಂದ, ಬೆನಕನಕೊಂಡ, ಯರೇಕುಪ್ಪಿ, ಜೋಯಿಸರಹರಳಹಳ್ಳಿ ನಿರಂತರ ಮಳೆಗೆ ಕಟಾವಿಗೆ ಬಂದ ಬೆಳ್ಳುಳ್ಳಿ ಕಿತ್ತು ಹಾಕಿದ ಭೂಮಿಯಲ್ಲಿಯೇ ಕೊಳೆಯುತ್ತಿದೆ. ಈಗಾಗಗಲೇ ಕಿತ್ತು ಒಣಗಿಸಲು ಹಾಕಲು ಳಮಳೆ ಬಿಟ್ಟುಬಿಡದೇ ಸುರಿಯುತ್ತದೆ. ಮುಂಗಾರು ಹಂಗಾಮಿಗೆ ಅಪಾರ ವೆಚ್ಚ ಮಾಡಿ ಬೆಳೆದ ಬೆಳ್ಳುಳ್ಳಿ ಕೊಳೆತು ನಾಶವಾಗುತ್ತಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದರು.

ADVERTISEMENT

ತೋಟಗಾರಿಕೆ ಇಲಾಖೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಸಂಬಂಧಿಸಿದ ಜಿಲ್ಲಾಧಿಕಾರಿ ಮೂಲಕ ಸತತ ಮಳೆಗೆ ಹಾನಿಗೊಂಡ ಬೆಳ್ಳುಳ್ಳಿ ಬೆಳೆ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ರವೀಂದ್ರಗೌಡ ಪಾಟೀಲ, ಹರಿಹರಗೌಡ ಪಾಟೀಲ, ಚನ್ನಬಸಪ್ಪ ಶಿವಲಿಂಗಪ್ಪನವರ, ಗೌರಮ್ಮ ತೆಗ್ಗಿನ, ಬಸವರಾಜ ಮತ್ತೂರ, ರುದ್ರಪ್ಪ ತಳವಾರ, ನಿಂಗರಡ್ಡಿ ಅಂತರವಳ್ಳಿ, ಪ್ರದೀಪ ಬೆನಕನಕೊಂಡ, ಶಿವಪ್ಪ ಉಪ್ಪಿನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.