
ಹಾವೇರಿ ತಾಲ್ಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ‘ದುಶ್ಚಟಗಳ ಭಿಕ್ಷೆ ಸದ್ಗುಣಗಳ ಧೀಕ್ಷೆ’ ಜನಜಾಗೃತಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸ್ವಾಮೀಜಿಗಳು
ಹಾವೇರಿ: ಜಿಲ್ಲೆಯ ಒಂದು ಹಳ್ಳಿಯಲ್ಲಿ ಮದುವೆ ವಯಸ್ಸಿನ 600 ಯುವಕರಿದ್ದು ಅವರಿಗೆ ಕನ್ಯೆ ಸಿಗುತ್ತಿಲ್ಲ ಎಂದು ಸದಾಶಿವ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ‘ದುಶ್ಚಟಗಳ ಭಿಕ್ಷೆ ಸದ್ಗುಣಗಳ ಧೀಕ್ಷೆ’ ಜನಜಾಗೃತಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸ್ವಾಮೀಜಿಗಳು ‘ದುಶ್ಚಟಗಳು ಕೇವಲ ಆರೋಗ್ಯ ಹಾಳು ಮಾಡಿಲ್ಲ. ಯುವಜನತೆಯ ಭವಿಷ್ಯವನ್ನು ಕಿತ್ತುಕೊಂಡಿವೆ ಎಂದರು.
ದುಶ್ಚಟಗಳಿಂದ ಯುವಜನತೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಜಮೀನು ಇದ್ದರೂ ಕೃಷಿ ಕೈಗೊಳ್ಳುತ್ತಿಲ್ಲ. ಇಂಥವರಿಗೆ ಹೆಣ್ಣು ಸಿಗುತ್ತಿಲ್ಲ’ ಎಂದು ಸದಾಶಿವ ಸ್ವಾಮೀಜಿ ಹೇಳಿದರು.
‘ಒಂದೇ ಹಳ್ಳಿಯಲ್ಲಿ 600 ಮಂದಿ ಮದುವೆ ವಯಸ್ಸಿನ ಯುವಕರಿದ್ದಾರೆ. ದುಶ್ಚಟಗಳಿಂದಾಗಿ ಅವರಿಗೆ ಕನ್ಯೆ ಸಿಗುತ್ತಿಲ್ಲ. ಕುಡುಕನಿಗೆ ಕನ್ಯೆ ನೀಡುವುದಿಲ್ಲವೆಂದು ಹೆಣ್ಣು ಹೆತ್ತವರು ಹೇಳುತ್ತಿದ್ದಾರೆ. ಈ ಹಳ್ಳಿಯ ಪರಿಸ್ಥಿತಿ ಕಂಡು ತುಂಬಾ ನೋವಾಗಿದೆ ಎಂದರು.
ಇದೇ ರೀತಿ ಪ್ರತಿ ಹಳ್ಳಿಯಲ್ಲೂ 50ರಿಂದ 70 ಮಂದಿ ಮದುವೆಯಾಗದ ಯುವಕರಿದ್ದಾರೆ. ಹೆತ್ತವರಿಗೆ ಅವರ ಮದುವೆಯದ್ದೇ ಚಿಂತೆಯಾಗಿದೆ. ಅಂಥ ಯುವಕರ ದುಶ್ಚಟಗಳನ್ನು ಜೋಳಿಗೆಗೆ ಹಾಕಿಸಿಕೊಂಡಿದ್ದೇವೆ. ಮದ್ಯ ಬಿಟ್ಟು ರಟ್ಟೆ ನಂಬಿ ದುಡಿದರೆ ಮದುವೆ ಭಾಗ್ಯವಿರುವುದಾಗಿ ಆಶೀರ್ವಾದ ಮಾಡಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.