ADVERTISEMENT

ಕೊಡಗಿಗೆ 8 ಲಕ್ಷಕ್ಕೂ ಅಧಿಕ ಪ್ರವಾಸಿಗರ ಲಗ್ಗೆ: ಸಾರ್ವಕಾಲಿಕ ದಾಖಲೆ

ಕೆ.ಎಸ್.ಗಿರೀಶ್
Published 1 ಜನವರಿ 2025, 0:10 IST
Last Updated 1 ಜನವರಿ 2025, 0:10 IST
<div class="paragraphs"><p>ಬೆಂಕಿ ಹಚ್ಚಿಕೊಂಡು ಪಾರ್ಟಿ ಮಾಡುತ್ತಿರುವ ಪ್ರವಾಸಿಗರು</p></div>

ಬೆಂಕಿ ಹಚ್ಚಿಕೊಂಡು ಪಾರ್ಟಿ ಮಾಡುತ್ತಿರುವ ಪ್ರವಾಸಿಗರು

   

ಮಡಿಕೇರಿ: ಕೊಡಗು ಜಿಲ್ಲೆಗೆ 2024ರ ಡಿಸೆಂಬರ್‌ನಲ್ಲಿ ಬರೋಬ್ಬರಿ 8 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದು, ಇದು ಸಾರ್ವಕಾಲಿಕ ದಾಖಲೆ ಎನಿಸಿದೆ. ಅದರಲ್ಲೂ ಮಾಸಾಂತ್ಯದಲ್ಲಿ ಲಕ್ಷಾಂತರ ಪ್ರವಾಸಿಗರು ಲಗ್ಗೆ ಇಟ್ಟಿದ್ದು, ಎಲ್ಲಿ ನೋಡಿದರಲ್ಲಿ ಪ್ರವಾಸಿಗರೇ ಕಾಣಸಿಗುತ್ತಿದ್ದಾರೆ.

ಇಲ್ಲಿರುವ 150ಕ್ಕೂ ಅಧಿಕ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳು ಮತ್ತು 4 ಸಾವಿರಕ್ಕೂ ಅಧಿಕ ಹೋಂಸ್ಟೇಗಳು ಭರ್ತಿಯಾಗಿವೆ. ಪ್ರವಾಸಿಗರು ಪ್ರವಾಹದಂತೆ ಜಿಲ್ಲೆಗೆ ಬರುತ್ತಲೇ ಇದ್ದು, ಸಂಚಾರ ದಟ್ಟಣೆ ಹೆಚ್ಚಾಗಿದೆ.

ADVERTISEMENT

ಡಿ. 26ರಂದು ಒಂದೇ ದಿನ ಇಲ್ಲಿನ ಕುಶಾಲನಗರದಲ್ಲಿರುವ ನಿಸರ್ಗಧಾಮ ಉದ್ಯಾನಕ್ಕೆ 6 ಸಾವಿರಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದರು. ಇಲ್ಲಿನ ಅಬ್ಬಿಫಾಲ್ಸ್, ರಾಜಾಸೀಟ್ ಸೇರಿದಂತೆ ಬಹುತೇಕ ಎಲ್ಲ ಪ್ರವಾಸಿ ಸ್ಥಳಗಳಲ್ಲೂ ಅಪಾರ ಜನಜಂಗುಳಿ ಕಂಡು ಬರುತ್ತಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕಿ ಅನಿತಾ ಭಾಸ್ಕರ್, ‘ಡಿಸೆಂಬರ್‌ನಲ್ಲಿ 8 ಲಕ್ಷಕ್ಕೂ ಅಧಿಕ ಪ್ರವಾಸಿಗರು ಕೊಡಗು ಜಿಲ್ಲೆಗೆ ಬಂದಿದ್ದು, ಇಷ್ಟು ಸಂಖ್ಯೆಯ ಪ್ರವಾಸಿಗರು ಒಂದೇ ತಿಂಗಳಿನಲ್ಲಿ ಈ ಹಿಂದೆ ಬಂದಿರಲಿಲ್ಲ. ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ’ ಎಂದು ಹೇಳಿದರು.

ಕೊಡಗು ಜಿಲ್ಲಾ ರೆಸಾರ್ಟ್, ಹೋಟೆಲ್, ರೆಸ್ಟೋರೆಂಟ್ ಅಸೋಸಿಯೇಷನ್‌ನ ಅಧ್ಯಕ್ಷ ದಿನೇಶ್ ಕಾರ್ಯಪ್ಪ ಪ್ರತಿಕ್ರಿಯಿಸಿ, ‘ಸದ್ಯ ಕೊಡಗು ಜಿಲ್ಲೆಯಲ್ಲಿರುವ ಎಲ್ಲ ಹೋಟೆಲ್‌ಗಳೂ ಭರ್ತಿಯಾಗಿವೆ. 2024ರಲ್ಲಿ ಶೇ 15ರಷ್ಟು ಹೋಟೆಲ್‌, ರೆಸಾರ್ಟ್‌ಗಳು ಹೊಸದಾಗಿ ತೆರೆದಿವೆ. ಜಿಲ್ಲೆಯ ಕುಶಾಲನಗರ ಭಾಗದಲ್ಲಿ ಪ್ರವಾಸೋದ್ಯಮ ವ್ಯಾಪಕವಾಗಿ ಬೆಳವಣಿಗೆ ಕಾಣುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.