ADVERTISEMENT

ಗಂಗಾವತಿ | ಗಣೇಶ ಮೂರ್ತಿ ವಿಸರ್ಜನೆ, ಜನಸಾಗರ

ಗಂಗಾವತಿ: ಗಾಂಧಿ ವೃತ್ತದಲ್ಲಿ ಗಣಪತಿಗಳ ಸಮಾಗಮ, ನಗರದಾದ್ಯಂತ ಪೊಲೀಸ್‌ ಕಣ್ಗಾವಲು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 4:55 IST
Last Updated 17 ಸೆಪ್ಟೆಂಬರ್ 2025, 4:55 IST
   

ಗಂಗಾವತಿ: ಇಲ್ಲಿನ ಹಳೆ ಐಬಿ, ವಾಲ್ಮೀಕಿ ವೃತ್ತ, ಗಾಂಧಿನಗರ, ಲಿಂಗರಾಜ ಕ್ಯಾಂಪ್‌ನಲ್ಲಿ ಗಜಾನನ ಯುವಕ ಸಂಘಗಳು ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಮಂಗಳವಾರ ಡಿಜೆ ಅಬ್ಬರ, ಯುವಕರ ಕುಣಿತ, ಪೊಲೀಸ್ ಬಿಗಿ ಬಂದೋಬಸ್ತ್, ಸಿಸಿ, ಡ್ರೋನ್ ಕ್ಯಾಮೆರಗಳ ಕಣ್ಗಾವಲು ನಡುವೆ ವೈಭವದಿಂದ ಜರುಗಿತು.

ಸಂಜೆ ಸೂರ್ಯಾಸ್ತದ ನಂತರ ಆರಂಭವಾದ 21 ದಿನಗಳ ಗಣೇಶ ಮೂರ್ತಿಗಳ ಭವ್ಯ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ತಾಲ್ಲೂಕಿನ ವಿವಿಧ ಗ್ರಾಮ, ಕೊಪ್ಪಳ, ವಿಜಯನಗರ, ಕನಕಗಿರಿ, ಕಾರಟಗಿ ತಾಲ್ಲೂಕಿನ ಅಪಾರ ಜನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. 

ಸಂಜೆಯಿಂದ ಜಾವದವರೆಗೂ ಡಿಜೆ ಸ್ದದು ಕೇಳಿ ಬಂತು. ಬಿಜಿಎಂ, ರಿಮಿಕ್ಸ್ ಹಾಡು, ಮ್ಯೂಜಿಕ್ ಸೇರಿ ಬಣ್ಣದ ಕಲರವದ ಲೈಟಿಂಗ್‌ನಲ್ಲಿ ಹುಚ್ಚೆದ್ದು ಕುಣಿದರು. ಬಾಬು ಜಗಜೀವರಾಂ ವೃತ್ತದ ಬಳಿಯ ಗಣೇಶ, ವಾಲ್ಮೀಕಿ ವೃತ್ತದ ಗಣೇಶ, ಗಾಂಧಿನಗರದ ಗಣೇಶ ಮೂರ್ತಿಗಳು ಗಾಂಧಿ ವೃತ್ತದಲ್ಲಿ ಒಟ್ಟಿಗೆ ಸೇರಿದವು.

ADVERTISEMENT

ಐಬಿ ಮತ್ತು ವಾಲ್ಮೀಕಿ ಗಣೇಶದ ಮುಂದೆ ನೂರಾರು ಮೀಟರ್ ರಸ್ತೆಯೂದ್ದಕ್ಕೂ ಯುವಕರು ಮನಬಂದಂತೆ ಕುಣಿದು ಕುಪ್ಪಳಿಸಿದರು. ಅಂಬೇಡ್ಕರ್ ವೃತ್ತದ ಬಳಿ 2 ತಾಸಿಗೂ ಹೆಚ್ಚು ಕುಣಿದರು.

21 ಸೆಕ್ಟರ್‌ಗಳಲ್ಲಿ ಪೊಲೀಸ್ ಸಿಬ್ಬಂದಿ ಕರ್ತವ್ಯ: ಗಂಗಾವತಿ ನಗರದಲ್ಲಿ 21ನೇ ದಿನಕ್ಕೆ 4 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದ್ದು ಎಎಸ್ಪಿ, ಡಿಎಸ್ಪಿ, ಪಿಐ, ಪಿಎಸ್ಐ, ಎಎಸ್ಐ, ಎಚ್‌ಸಿ, ಪಿಸಿ, ಹೋಂ ಗಾರ್ಡ್, 1 ಐ‌ಆರ್‌ಬಿ, 4ಡಿಎಆರ್ ವಾಹನ ಸೇರಿ ಒಟ್ಟು 977 ಪೊಲೀಸ್ ಸಿಬ್ಬಂದಿ ನಗರದ ಎಲ್ಲಡೆ 21 ಸೆಕ್ಟರ್‌ಗಳಲ್ಲಿ ಕರ್ತವ್ಯ ನಿರ್ವಹಿಸಿ ಬಿಗಿ ಬಂದೋಬಸ್ತ್ ನಡೆಸಿದರು.

ಸಿಸಿಟಿವಿ ಕ್ಯಾಮೆರಾ, ವಿಡಿಯೊ, ಡ್ರೋನ್ ಕಣ್ಗಾವಲು: 4 ಗಣೇಶ ಮೂರ್ತಿಗಳ ವಿಸರ್ಜನೆ ವೇಳೆ ಗಲಭೆ, ಜಗಳ ನಡೆಯದಂತೆ ಎಚ್ಚರಿ ವಹಿಸಿ ಮರೆವಣಿಗೆ ರಸ್ತೆ, ಗಾಂಧಿ ವೃತ್ತ ಸೇರಿ ಪ್ರಮುಖ ಸ್ಥಳಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳ ಮೂಲಕ ಕಣ್ಗಾವಲು ವಹಿಸಲಾಗಿತ್ತು. ಸೂಕ್ಷ್ಮ ಪ್ರದೇಶ, ಮಸೀದಿಗಳ ಬಳಿ ಮತ್ತು ಬೃಹತ್ ಕಟ್ಟಡಗಳ ಮೇಲೆ ಪೊಲೀಸ್ ಸಿಬ್ಬಂದಿ ವಿಡಿಯೊ ಮಾಡಿದರು. ಅಲ್ಲಲ್ಲಿ ಡ್ರೋನ್‌ಗಳನ್ನು ಹಾರಿಸಿ ಜನರ ಚಲನವಲನದ ಮೇಲೆ ಇಟ್ಟಿದ್ದರು. 

ಮಸೀದಿಗಳ ಬಳಿ ಕಟ್ಟೆಚ್ಚರ: ಗಣೇಶ ಮೂರ್ತಿಗಳ ಎಡ ಮತ್ತು ಬಲಭಾಗ, ಮುಂಭಾಗ, ಹಿಂಭಾಗ ಸೇರಿ ನಗರದ ಜಾಮೀಯಾ, ಇಸ್ಲಾಂಪುರ ಮಸೀದಿ, ಕರ್ನೂಲ್ ಬಾಬಾ ದರ್ಗಾ, ಬಿಲಾಲ್ ಮಸೀದಿ, ಕಿಲ್ಲಾ ಏರಿಯಾ ಮಾರ್ಕೇಟ್, ಇಲಾಹಿ ಮಸೀದಿ, ಬಿಪಿನ್ ರಾವತ್ ವೃತ್ತದ ಬಳಿ ನೂರಾರು ಪೊಲೀಸರಿಂದ ಹೈ ಅಲರ್ಟ್‌ನಲ್ಲಿ ಇದ್ದಿದ್ದು ಕಂಡುಬಂತು. 

ಗಣೇಶ ಮೂರ್ತಿ ಪ್ರತಿಷ್ಠಾಪಕರಿಗೆ ಎಚ್ಚರಿಕೆ: ಗಣೇಶ ಮೂರ್ತಿ ವಿಸರ್ಜನೆ ಹಿನ್ನಲೆಯಲ್ಲಿ ಮಂಗಳವಾರ ಬೆಳಿಗ್ಗೆ ವಿಜಯ ವೃಂದ, ವಾಲ್ಕೀಕಿ, ಗಜಾನನ, ವೀರ ಸಾವರ್ಕರ್ ಗಣೇಶ ಮೂರ್ತಿಗಳ ಪ್ರತಿಷ್ಠಾಪಕರನ್ನ ಎಸ್ಪಿ ರಾಮ್ ಎಲ್. ಅರಸಿದ್ದಿ ಕರೆಸಿ ಸಭೆ ನಡೆಸಿ, ‘ಮೂರ್ತಿ ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇ‌ಕು’ ಎಂದು ಸೂಚಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.