ADVERTISEMENT

ಕೊಪ್ಪಳ: ಹಿಂದೂ-ಮುಸ್ಲಿಂ ಗೆಳೆಯರಿಂದ ಗಣೇಶನಿಗೆ ಪೂಜೆ, ಅಭಿಷೇಕ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2025, 10:24 IST
Last Updated 27 ಆಗಸ್ಟ್ 2025, 10:24 IST
   

ಅಳವಂಡಿ (ಕೊಪ್ಪಳ ‌ಜಿಲ್ಲೆ) : ಕೊಪ್ಪಳ ತಾಲ್ಲೂಕಿನ ಅಳವಂಡಿ ಗ್ರಾಮದ ಬಜಾರದಲ್ಲಿರುವ ವಿಜಯ ಗಣಪತಿ ಮಂದಿರದಲ್ಲಿ ಗ್ರಾಮದ ಹಿಂದೂ - ಮುಸ್ಲಿಂ ಸಮುದಾಯದ ಗೆಳೆಯರ ಬಳಗದ ವತಿಯಿಂದ ಗಣೇಶ ಮೂರ್ತಿಗೆ ಬುಧವಾರ ವಿಶೇಷ ಪೂಜೆ ಹಾಗೂ ಅಭಿಷೇಕ ನಡೆಯಿತು.

ಗಣೇಶ ಚತುರ್ಥಿ ಅಂಗವಾಗಿ ದೇವಸ್ಥಾನದ ಗಣೇಶ ಮೂರ್ತಿಗೆ ಬೆಳಿಗ್ಗೆ ವಿಶೇಷ ಪೂಜೆ ಹಾಗೂ ಅಭಿಷೇಕ ನಡೆದವು. ಬಳಿಕ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಗಣೇಶ ದೇವಸ್ಥಾನವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.

ಪ್ರತಿವರ್ಷವೂ ಇಲ್ಲಿನ ಗೆಳೆಯರ ಬಳಗದ ವತಿಯಿಂದ ಈ ಕಾರ್ಯ ನಡೆಯುತ್ತಿದ್ದು, ಗೆಳೆಯರ ಬಳಗದಲ್ಲಿ ಹಿಂದೂ - ಮುಸ್ಲಿಂ ಎರಡು ಸಮಾಜದ ಸದಸ್ಯರಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.