ADVERTISEMENT

ಜೂಡೊ: ಕಂಚು ಗೆದ್ದ ಅನುಷಾ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 5:51 IST
Last Updated 30 ಅಕ್ಟೋಬರ್ 2025, 5:51 IST
ಕಂಚು ಗೆದ್ದ ಅನುಷಾ ಜೊತೆ ಕೋಚ್‌ ಬಾಬುಸಾಬ್
ಕಂಚು ಗೆದ್ದ ಅನುಷಾ ಜೊತೆ ಕೋಚ್‌ ಬಾಬುಸಾಬ್   

ಕೊಪ್ಪಳ: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ರಾಜ್ಯ ಸರ್ಕಾರ ಹಾಗೂ ಡಾನ್ ಬೋಸ್ಕೊ ಪದವಿ ಪೂರ್ವ ಕಾಲೇಜು, ಚಿತ್ರದುರ್ಗ ಸಂಯುಕ್ತ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜುಗಳ ಜೂಡೊ ಕ್ರೀಡಾಕೂಟದಲ್ಲಿ ಜಿಲ್ಲೆಯ ಅನುಷಾ ಕಂಚಿನ ಪದಕ ಜಯಿಸಿದ್ದಾರೆ.

ಬಾಲಕಿಯರ 40 ಕೆ.ಜಿ ತೂಕ ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಮುಖ್ಯ ತರಬೇತುದಾರ ಬಾಬುಸಾಬ್ ಮಾರ್ಗದರ್ಶನ ಮಾಡಿದ್ದಾರೆ.

ಪದಕ ವಿಜೇತೆ ಅನುಷಾ ಮಾತನಾಡಿ ‘ಜೂಡೊ ಕ್ರೀಡೆಯು ನನ್ನ ಜೀವನದ ಭಾಗವಾಗಿದೆ. ಪ್ರತಿದಿನವೂ ಕಠಿಣ ತರಬೇತಿಯಲ್ಲಿ ತೊಡಗಿಕೊಂಡು ಈ ಸಾಧನೆ ಮಾಡಿದ್ದೇನೆ. ಈಗಿನ ಸಾಧನೆ ಮುಂದೆ ಮತ್ತಷ್ಟು ಪದಕಗಳನ್ನು ಗೆಲ್ಲಲು ಪ್ರೇರಣೆಯಾಗಲಿದೆ’ ಎಂದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.