ADVERTISEMENT

ಕನಕಗಿರಿ: ₹ 8.50 ಲಕ್ಷ ಮೌಲ್ಯದ ಆಭರಣ, ನಗದು ಕಳ್ಳತನ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 4:05 IST
Last Updated 5 ಫೆಬ್ರುವರಿ 2026, 4:05 IST
   

ಕನಕಗಿರಿ: ತಾಲ್ಲೂಕಿನ ನವಲಿ ಗ್ರಾಮದ‌ ವ್ಯವಸಾಯ ಸೇವಾ ಸಹಕಾರಿ ಸಂಘದ ಸಿಪಾಯಿಯಾದ (ಸಹಾಯಕ ಹುದ್ದೆ) ಮೆಹಬೂಬಸಾಬ ಪಿಂಜಾರ ಅವರ‌ ಮನೆಯಲ್ಲಿ ಮಂಗಳವಾರ ಕಳ್ಳತನವಾಗಿದೆ.

‘ಗ್ರಾಮದ ವೀರಸಂಗಪ್ಪ ಪಟ್ಟಣಶೆಟ್ಟಿ ಅವರಿಗೆ ಸೇರಿದ ಮನೆಯಲ್ಲಿ ಕಳೆದ ಆರು ವರ್ಷಗಳಿಂದ ಬಾಡಿಗೆ ಇದ್ದು 15 ವರ್ಷದಿಂದ ಸಂಘದಲ್ಲಿ ಸಿಪಾಯಿ ಕೆಲಸ‌ ಮಾಡುತ್ತಿರುವೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳರು ₹ 1.50‌ ಲಕ್ಷ ನಗದು ಹಾಗೂ ₹ 7.50‌ ಲಕ್ಷ ಮೊತ್ತದ‌ ಬಂಗಾರದ ಉಂಗುರ, ನೆಕ್ಲೆಸ್, ಮಂಗಳಸೂತ್ರ, ತಾಳಿ, ಕಿವಿಯೋಲೆಯನ್ನು ಕದ್ದುಕೊಂಡು ಹೋಗಿದ್ದಾರೆ’ ಎಂದು ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಯುವತಿ ನಾಪತ್ತೆ: ದೂರು ದಾಖಲು

ADVERTISEMENT

ಕನಕಗಿರಿ: ‘ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನನ್ನ ಮಗಳು ನಿಂಗಮ್ಮ ಕೋಮಾರ್‌ ಮನೆಯಿಂದ‌ ಹೊರ ಹೋಗಿದ್ದು ನಾಪತ್ತೆಯಾಗಿದ್ದಾಳೆ’ ಎಂದು ದ್ಯಾಮವ್ವ ದೇವಪ್ಪ ಎಂಬುವವರು ದೂರು ನೀಡಿದ್ದಾರೆ

ಸಂಬಂಧಿಕರು ಹಾಗೂ ತಾನು ಹುಡುಕಿದ್ದು ಸಿಕ್ಕಿಲ್ಲ. ‌ತನ್ನ ಮಗಳನ್ನು ಪತ್ತೆ ಹಚ್ಚಿ‌ ಕೊಡುವಂತೆ ಯುವತಿಯ ತಾಯಿ ನೀಡಿದ ದೂರಿನನ್ವಯ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.