ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಸುಲೇಕಲ್ ಗ್ರಾಮದಲ್ಲಿ ಬಣವೆಗೆ ಬಿದ್ದಿರುವ ಬೆಂಕಿ ನಂದಿಸಲು ಜನರ ಪ್ರಯತ್ನ
ಪ್ರಜಾವಾಣಿ ಚಿತ್ರ
ಕನಕಗಿರಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಸುಳೇಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬೆನಕನಾಳ ಗ್ರಾಮದ ರೈತ ರಮೇಶ ಅವರ ಹೊಲದಲ್ಲಿ ಹಾಕಿದ್ದ ಭತ್ತದ ಹುಲ್ಲು, ನವಣಿ ಹಾಗೂ ತೊಗರಿ ಬಣವಿ ಸೋಮವಾರ ಬೆಂಕಿಗೆ ಆಹುತಿಯಾಗಿದೆ.
ತಲಾ ಒಂದು ಟ್ರ್ಯಾಕ್ಟರ್ ಭತ್ತದ ಹುಲ್ಲು, ತೊಗರಿ ಹೊಟ್ಟು ಹಾಗೂ ಮೂರು ಟ್ರಾಕ್ಟರ್ ನವಣೆಯ ಸೊಪ್ಪು ಬೆಂಕಿಗೆ ಸುಟ್ಟು ಹೋಗಿದೆ ಎಂದು ರೈತ ರಮೇಶ ತಿಳಿಸಿದ್ದಾರೆ. ಅಂದಾಜು ₹1.5 ಲಕ್ಷ ನಷ್ಟವಾಗಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ಗೊತ್ತಾಗಿದೆ
ಘಟನೆ ನಡೆದ ಸ್ಥಳಕ್ಕೆ ಗಂಗಾವತಿ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸಿದರು. ಗ್ರಾಮ ಆಡಳಿತ ಅಧಿಕಾರಿ ಶಿವರಾಜ ಭೋವಿ ಭೇಟಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.