ಗಂಗಾವತಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಸಾಣಾಪುರದಲ್ಲಿ ಪ್ರತಿವರ್ಷ ವಿದೇಶಿ ಪ್ರವಾಸಿಗರಿಂದ ಸಂಭ್ರಮದಿಂದ ನಡೆಯುತ್ತಿದ್ದ ಹೋಳಿ ಹಬ್ಬ ಈ ಬಾರಿ ನೀರಸವಾಗಿತ್ತು.
ಸಾಣಾಪುರದಲ್ಲಿ ಇಸ್ರೇಲ್ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಿದ್ದರು. ಆದರೆ ಇತ್ತೀಚೆಗೆ ಇಬ್ಬರು ಯುವತಿಯರ ಮೇಲೆ ಅತ್ಯಾಚಾರ ಮತ್ತು ಯುವಕನ ಕೊಲೆ ನಡೆದಿದ್ದರಿಂದ ಹಬ್ಬಕ್ಕೂ ಒಂದು ವಾರದ ಮೊದಲೇ ಅವರು ರೆಸಾರ್ಟ್ ಹಾಗೂ ಹೋಂ ಸ್ಟೇಗಳನ್ನು ತೊರೆದಿದ್ದರು.
ವಿದೇಶಿ ಪ್ರವಾಸಿಗರು ಇದ್ದರೂ ಅವರ ಸಂಖ್ಯೆ ನೀರಸವಾಗಿತ್ತು.ರೆಸಾರ್ಟ್‌ಗಳು ಖಾಲಿಯಾಗಿದ್ದು ಅಲ್ಲಲ್ಲಿ ಚಿಣ್ಣರು, ಮಹಿಳೆಯರು, ಯುವಕರು ಹಬ್ಬ ಆಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.