
ಕಿಕ್ಕೇರಿ: ಅರಿವಿಲ್ಲದೆ ಮಾಡಿದ ತಪ್ಪು ಕೂಡ ಅಪರಾಧ ಅಗಲಿದ್ದು ಮೊದಲು ಕಾನೂನಿನ ಅರಿವು ಮೂಡಿಸಿಕೊಳ್ಳಿ ಎಂದು ಕಿಕ್ಕೇರಿ ಪಿಎಸ್‌ಐ ಜಯರಾಂ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮೊಬೈಲ್, ಸಾಮಾಜಿಕ ಜಾಲತಾಣಗಳ ಅಮಿಷ, ತಪ್ಪು ಮಾಹಿತಿಯಿಂದ ಅಪರಾಧ, ಸೈಬರ್ ಕ್ರೈಂ, ಅಪ್ರಾಪ್ತ ಮಕ್ಕಳ ವಿವಾಹ ಹೆಚ್ಚಿಸುತ್ತಿದೆ. ಅಪ್ರಾಪ್ತ ಮಕ್ಕಳು, ಕುಡಿದು ವಾಹನ ಚಲಾವಣೆ ಮಾಡುವವರು, ರಸ್ತೆ ಸುರಕ್ಷತಾ ನಿಯಮ ಪಾಲಿಸದೆ, ಇರುವ ವ್ಯಕ್ತಿಗಳಿಂದ ಜೀವಹಾನಿ, ಅಪರಾಧಗಳು ಸಂಭವಿಸುತ್ತಿವೆ’ ಎಂದರು.
‘ಯಾವುದೇ ಬ್ಯಾಂಕ್‌ಗಳು ಮೊಬೈಲ್‌ಗಳಲ್ಲಿ ಮಾಹಿತಿ ಕೇಳುವುದಿಲ್ಲ. ಅನವಶ್ಯಕವಾಗಿ ಮೊಬೈಲ್‌ನಲ್ಲಿ ಮಾಹಿತಿ ಹಂಚಿಕೊಂಡು ಹಣ ಕಳೆದುಕೊಳ್ಳದಿರಿ’ ಎಂದು ಎಚ್ಚರಿಸಿದರು.
ಎಎಸ್‌ಐ ರಮೇಶ್, ಸಿಬ್ಬಂದಿಗಳಾದ ಪ್ರವೀಣ್, ಮಂಜು, ಸರ‍್ವಜನಿಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.