ಮೈಸೂರು: ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಂಡ ಗಜಪಡೆಯನ್ನು ಭಾನುವಾರ ಅರಮನೆ ಆವರಣದಿಂದ ಬೀಳ್ಕೊಡಲಾಯಿತು.
14 ಆನೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಹಣ್ಣು ತಿನ್ನಿಸಲಾಯಿತು. ಎಲ್ಲ ಆನೆಗಳು ಏಕಕಾಲಕ್ಕೆ ಸೊಂಡಿಲನ್ನೆತ್ತಿ ನಮಿಸಿದವು. ಬಳಿಕ ಒಂದೊಂದಾಗಿ ಲಾರಿ ಏರಿದವು.
ಕಳೆದ ಎರಡು ತಿಂಗಳ ಕಾಲ ದಸರೆಯ ನೆಪದಲ್ಲಿ ನಗರದಲ್ಲಿ ಬೀಡು ಬಿಟ್ಟು ಮನೋರಂಜನೆಯ ಕೇಂದ್ರವಾಗಿದ್ದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಜೊತೆ ಫೋಟೊ ಕ್ಲಿಕ್ಲಿಸಲು ಜನ ಮುಗಿಬಿದ್ದರು. ಮಕ್ಕಳು ಕಣ್ಣೀರ ವಿದಾಯ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.