ADVERTISEMENT

ಮೈಸೂರು ನಗರದಲ್ಲಿ ಭಾರಿ ಮಳೆ; ಕುಸಿದ ಸೇತುವೆ

​ಪ್ರಜಾವಾಣಿ ವಾರ್ತೆ
Published 17 ಮೇ 2022, 5:29 IST
Last Updated 17 ಮೇ 2022, 5:29 IST
ಕೊಚ್ಚಿ ಹೋಗಿರುವ ಬೋಗಾದಿಯ ನಾಗಲಿಂಗೇಶ್ವರ ದೇಗುಲದ ಹಿಂಭಾಗದ ಸೇತುವೆ
ಕೊಚ್ಚಿ ಹೋಗಿರುವ ಬೋಗಾದಿಯ ನಾಗಲಿಂಗೇಶ್ವರ ದೇಗುಲದ ಹಿಂಭಾಗದ ಸೇತುವೆ   

ಮೈಸೂರು: ನಗರದಲ್ಲಿ ಸೋಮವಾರ ರಾತ್ರಿ ಇಡಿ ಸುರಿದ ಭಾರಿ ಮಳೆಗೆ ಸೇತುವೆಯೊಂದು ಕುಸಿದಿದ್ದರೆ, ಮರಗಳು ಬುಡಮೇಲಾಗಿವೆ.
ಇಲ್ಲಿನ ಬೋಗಾದಿಯ ನಾಗಲಿಂಗೇಶ್ವರ ದೇಗುಲದ ಹಿಂಭಾಗದ ಸೇತುವೆ ಕೊಚ್ಚಿ ಕೊಂಡು ಹೋಗಿದೆ. ಕುಕ್ಕರಹಳ್ಳಿ ಕೆರೆ ಸಮೀಪ ಮರವೊಂದು ಧರೆಗುರುಳಿವೆ. ರಾಜಕುಮಾರರಸ್ತೆ, ಮೈಮುಲ್ ಸಮೀಪದ ಬನ್ನೂರು ರಸ್ತೆಯಲ್ಲಿ ಚರಂಡಿ ಕಟ್ಟಿಕೊಂಡು ಮನೆಗಳಿಗೆ ನೀರು ನುಗ್ಗಿದೆ.

ಪಾಲಿಕೆಯ ರಕ್ಷಣಾ ತಂಡ ಅಭಯ್ 3 ರಕ್ಷಣಾ ಕಾರ್ಯ ನಡೆಸಿದೆ.

ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಿಗ್ಗೆ 8 ಗಂಟೆಯವರೆಗೆ 10 ಸೆಂ.ಮೀಗೂ ಅಧಿಕ ಮಳೆ ನಗರದಲ್ಲಿ ಸುರಿದಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.