ADVERTISEMENT

ಕಾಂಗ್ರೆಸ್‌, ಬಿಜೆಪಿಯಿಂದ ಜೆಡಿಎಸ್ ಮುಗಿಸುವ ಯತ್ನ: ಸಾ.ರಾ.ಮಹೇಶ್‌

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2021, 3:45 IST
Last Updated 16 ಡಿಸೆಂಬರ್ 2021, 3:45 IST
ಸಾ.ರಾ.ಮಹೇಶ್‌
ಸಾ.ರಾ.ಮಹೇಶ್‌   

ಮೈಸೂರು: ‘ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಈಗಲೂ ಬಲಶಾಲಿ ಎಂಬುದನ್ನು ಪಕ್ಷದ ಕಾರ್ಯಕರ್ತರು, ಮುಖಂ
ಡರು ವಿಧಾನ ಪರಿಷತ್‌ ಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದಾರೆ’ ಎಂದು ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌ ಪ್ರತಿಪಾದಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಎರಡೂ ರಾಷ್ಟ್ರೀಯ ಪಕ್ಷಗಳು ಸೇರಿಕೊಂಡು ಜೆಡಿಎಸ್‌ ಮುಗಿಸಲು ಪ್ರಯತ್ನಿಸುತ್ತಿವೆ. ಆದರೆ ಪರಿಷತ್‌ ಚುನಾವಣೆಯಲ್ಲಿ ಆರು ಕಡೆ ಸ್ಪರ್ಧಿಸಿದ್ದ ಪಕ್ಷ ಎರಡು ಸ್ಥಾನ ಗೆದ್ದುಕೊಂಡಿದೆ. 2023ರ ಚುನಾವಣೆಯಲ್ಲೂ ಇದೇ ರೀತಿಯ ಫಲಿತಾಂಶ ಬರಲಿದೆ. ರಾಷ್ಟ್ರೀಯ ಪಕ್ಷಗಳಿಗೆ ನಮ್ಮ ಬೆಂಬಲ ಅನಿವಾರ್ಯವಾಗಲಿದೆ’ ಎಂದರು.

‘ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಉಸ್ತುವಾರಿ ಸಚಿವರು ಇಲ್ಲೇ ವಾಸ್ತವ್ಯ ಹೂಡಿ ಪ್ರಚಾರ ಕೈಗೊಂಡಿದ್ದರು. ಅವರ ಅಭ್ಯರ್ಥಿ ಆರು ತಿಂಗಳಿನಿಂದಲೂ ಸಿದ್ಧತೆ ನಡೆಸಿದ್ದರು. ನಮಗೆ ಚುನಾವಣೆಗೆ ಸಿದ್ದತೆ ನಡೆಸಲು 15 ದಿನಗಳಷ್ಟೇ ದೊರೆತಿ
ದ್ದವು. ಆದರೂ ಗೆದ್ದಿದ್ದೇವೆ. ಜೆಡಿಎಸ್‌ ಪ್ರಬಲವಾಗಿದೆ ಎಂಬುದು ಸಾಬೀತಾಗಿದೆ’ ಎಂದರು.

ADVERTISEMENT

ನೀವು ಕಡ್ಲೆಪುರಿ ಕೊಟ್ಟಿದ್ದಾ?: ಶಾಸಕ ಜಿ.ಟಿ.ದೇವೇಗೌಡ ಅವರ ಹೆಸರು ಹೇಳದೆಯೇ ವಾಗ್ದಾಳಿ ನಡೆಸಿದ ಸಾ.ರಾ.ಮಹೇಶ್, ‘ಪಕ್ಷ ವಿರೋಧಿ ಕೆಲಸ ಮಾಡುತ್ತಿರುವ ನಾಯಕರು ಎಷ್ಟೇ ನೋವು ಕೊಟ್ಟರೂ ಕಾರ್ಯಕರ್ತರು ಸಹಿಸಿಕೊಂಡಿದ್ದಾರೆ. ಅದನ್ನು ಅರ್ಥಮಾ
ಡಿಕೊಳ್ಳಿ. ನಾವು ನಿಮ್ಮನ್ನು ನಾಯಕರೆಂದು ಒಪ್ಪಿಕೊಂಡಿದ್ದೇವೆ. ನೀವು ಇತರರಿಗೆ ಮಾರ್ಗದರ್ಶನ ನೀಡಿ. ಪಕ್ಷದ ಚಿಹ್ನೆ
ಯಿಂದ ಗೆದ್ದಿರುವ ಕಾರಣ ಪಕ್ಷದ ಪರವಾಗಿ ಕೆಲಸ ಮಾಡಿ’ ಎಂದರು.

‘ನಮ್ಮ ಅಭ್ಯರ್ಥಿ ಮತದಾರರಿಗೆ ಕುಂಕುಮ ಕೊಟ್ಟು, ಹಣ ಹಂಚಿದ್ದಾರೆ ಎಂದು ಹೇಳಿದ್ದೀರಿ. ನೀವೆಲ್ಲಾ ಚುನಾವಣೆ
ಯಲ್ಲಿ ಕಡ್ಲೆಪುರಿ ಕೊಟ್ಟಿದ್ದಾ? ಜೆಡಿಎಸ್‌ಗೆ ಯಾರೂ ಅನಿವಾರ್ಯವಲ್ಲ. ಜೆಡಿಎಸ್ ನಮಗೆ ಅನಿವಾರ್ಯ’ ಎಂದರು.

‘ಸಂದೇಶ್ ನಾಗರಾಜ್ ಕುಟುಂಬಕ್ಕೆ ಜೆಡಿಎಸ್ ಯಾವ ರೀತಿಯಲ್ಲೂ ಮೋಸ ಮಾಡಿಲ್ಲ. ಅವರು ನಾಲ್ಕು ವರ್ಷಗಳಿಂದ ಪಕ್ಷದಿಂದ ಅಂತರ ದೂರವಿದ್ದಾರೆ. ಅವರಾಗಿಯೇ ಹೋದರೇ ಹೊರತು ನಾವು ಯಾರೂ ದೂರ ಮಾಡಿಲ್ಲ. ಟಿಕೆಟ್ ಕೈತಪ್ಪಿದ್ದಕ್ಕೆ ನಮ್ಮ‌ ಪಕ್ಷದ ನಾಯಕರನ್ನು ಏಕೆ ದೂರುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ’ ಎಂದರು.

ಮುಖಂಡರಾದ ಆರ್‌.ಲಿಂಗಪ್ಪ, ಬೀರಿಹುಂಡಿ ಬಸವಣ್ಣ, ಎಂ.ಜೆ.ರವಿಕುಮಾರ್, ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ಕೆ.ಟಿ.ಚೆಲುವೇಗೌಡ, ಪಾಲಿಕೆ ಸದಸ್ಯರಾದ ಪ್ರೇಮಾ, ಎಸ್‌ಬಿಎಂ ಮಂಜು ಪಾಲ್ಗೊಂಡಿದ್ದರು.

‘ವೈಯಕ್ತಿಕ ಟೀಕೆ ನನಗೂ ಗೊತ್ತು’: ಚುನಾವಣೆ ಪ್ರಚಾರದ ಸಮಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಮಾಡಿದ್ದ ಆರೋಪಗಳಿಗೆ ಪ್ರತಿಕ್ರಿಯಿಸಿದ ಜೆಡಿಎಸ್‌ ಪಕ್ಷದ ವಿಜೇತ ಅಭ್ಯರ್ಥಿ ಸಿ.ಎನ್‌.ಮಂಜೇಗೌಡ, ‘ವೈಯುಕ್ತಿಕವಾಗಿ ಟೀಕಿಸಲು ನನಗೂ ಗೊತ್ತು. ಪಕ್ಷದ ವರಿಷ್ಠರು ಅನುಮತಿ ನೀಡಿದರೆ ಸಚಿವರ ಬಗ್ಗೆಯೂ ನಾನೂ ಮಾತನಾಡುತ್ತೇನೆ. ನಮ್ಮ ತಾಳ್ಮೆಗೂ ಮಿತಿ ಇದೆ. ಅವರಿಗೆ ತಕ್ಕ ಉತ್ತರ ನೀಡುತ್ತೇನೆ’ ಎಂದರು.

‘ಜೆಡಿಎಸ್‌ನಲ್ಲಿ ಕೆಲವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿ ನನ್ನನ್ನು ಸೋಲಿಸಲು ಪ್ರಯತ್ನಿಸಿದರು. ಆದರೆ ಅವರ ಆಟ ನಡೆಯಲಿಲ್ಲ. ಪಕ್ಷ ವಿರೋಧಿಗಳು ಕತ್ತೆಗೆ ಸಮಾನ’ ಎಂದು ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.