ADVERTISEMENT

ರಾಜ್ಯಮಟ್ಟದ ಬಾಲಕಿಯರ ಅಥ್ಲೆಟಿಕ್ಸ್‌: ಮೈಸೂರಿನ ಮಮತಾಗೆ ಚಿನ್ನ

200 ಮೀಟರ್ಸ್ ಓಟ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 7:58 IST
Last Updated 7 ನವೆಂಬರ್ 2025, 7:58 IST
ಹರ್ಡಲ್ಸ್‌ನಲ್ಲಿ ಸ್ಪರ್ಧಿಯೊಬ್ಬರ ಓಟ
ಹರ್ಡಲ್ಸ್‌ನಲ್ಲಿ ಸ್ಪರ್ಧಿಯೊಬ್ಬರ ಓಟ   

ಮೈಸೂರು: ನಗರದ ಎಂ.ಮಮತಾ ಅವರು ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಬಾಲಕಿಯರ ಅಥ್ಲೆಟಿಕ್ಸ್ ಕೂಟದಲ್ಲಿನ 200 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಚಿನ್ನ ಗೆದ್ದರು.

ಶಾಲಾ ಶಿಕ್ಷಣ ಇಲಾಖೆಯು (ಪದವಿಪೂರ್ವ) ಆರ್‌.ವಿ. ಪಿಯು ಕಾಲೇಜು ಆಶ್ರಯದಲ್ಲಿ ಆಯೋಜಿಸಿರುವ ಕೂಟದ ಎರಡನೇ ದಿನವಾದ ಗುರುವಾರ ನಡೆದ ಸ್ಪರ್ಧೆಯಲ್ಲಿ ಮಮತಾ, 25.40 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು. ಬೆಂಗಳೂರು ಉತ್ತರದ ಧರಣೀಶ್ವರಿ ಮತ್ತು ದಕ್ಷಿಣ ಕನ್ನಡದ ನಿಧೀಕ್ಷಾ ನಾಯ್ಕ್‌ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದರು.

ಫಲಿತಾಂಶ

ADVERTISEMENT

800 ಮೀಟರ್ಸ್ ಓಟ: ನಾಗಿನಿ (ದಕ್ಷಿಣ ಕನ್ನಡ, ಕಾಲ: 2 ನಿಮಿಷ 15.30 ಸೆಕೆಂಡ್‌) ರಶ್ಮಿತಾ ಗೌಡ (ರಾಮನಗರ)–2, ಗಾನವಿ (ದಕ್ಷಿಣ ಕನ್ನಡ)–3.

3 ಕಿ.ಮೀ ನಡಿಗೆ ಓಟ: ಶೋಭಾ ವಿಟ್ಟಲಪುಂಜಿ (ಬೆಳಗಾವಿ, ಕಾಲ:17 ನಿಮಿಷ 50.40 ಸೆಕೆಂಡ್‌)–1, ಕೆ.ಎಂ.ಪ್ರಿಯಾಂಕಾ (ಮೈಸೂರು)–2, ಕಾವೇರಿ ರಮೇಶ್ ತಳವಾರ (ಬಾಗಲಕೋಟೆ)–3.

400 ಮೀಟರ್ಸ್‌ ಓಟ:  ರಶ್ಮಿತಾ ಗೌಡ (ರಾಮನಗರ, ಕಾಲ: 58.01 ಸೆಕೆಂಡ್‌)–2, ನಿಧೀಕ್ಷಾ ನಾಯ್ಕ್ (ದಕ್ಷಿಣ ಕನ್ನಡ)–2, ಎಂ.ಮಮತಾ (ಮೈಸೂರು)–3.

3 ಸಾವಿರ  ಮೀಟರ್ಸ್ ಓಟ: ಚರಿಷ್ಮಾ (ದಕ್ಷಿಣ ಕನ್ನಡ, ಕಾಲ: 10 ನಿಮಿಷ 44.02 ಸೆಕೆಂಡ್‌)–1, ಸಂಜನಾ ಬಿಂಗಲಗಿ (ಬೆಂಗಳೂರು ಉತ್ತರ)–2,  ಸರಸ್ವತಿ ಮುತ್ತೇಪ್ಪ ಚಂದರಗಿ (ಚಿಕ್ಕೋಡಿ)–3

ಟ್ರಿಪಲ್ ಜಂಪ್: ಪೂರ್ಣಿಮಾ (ಉಡುಪಿ, ದೂರ: 11.55 ಮೀಟರ್ಸ್)–1, ಎಂ.ಭುವನಾ (ಬೆಂಗಳೂರು ಗ್ರಾಮಾಂತರ)–2, ಭುವನೇಶ್ವರಿ (ಮೈಸೂರು)–3.

400 ಮೀಟರ್ಸ್ ಹರ್ಡಲ್ಸ್: ರಮ್ಯಾ (ವಿಜಯಪುರ, ಕಾಲ: 1 ನಿಮಿಷ 6.10 ಸೆಕೆಂಡ್)–1, ನಿರ್ಮಲಾ (ದಕ್ಷಿಣ ಕನ್ನಡ)–2, ವಿ.ದಿವ್ಯಾ (ಬೆಂಗಳೂರು ಗ್ರಾಮಾಂತರ)–3.

4X100 ಮೀಟರ್ ರಿಲೇ: 1. ಮಾನ್ವಿ ವಿ.ಶೆಟ್ಟಿ, ಭಾನವಿ, ಗೋಪಿಕಾ, ವೈಷ್ಣವಿ, (ದಕ್ಷಿಣ ಕನ್ನಡ, ಕಾಲ: 50.40 ಸೆಕೆಂಡ್), ಮಮತಾ, ದೇವಕಿ ತುಳಸಿ ಗೇರಪ್ಪ ಚಿಮ್ಮನಕಟ್ಟಿ, ದೀಪಿಕಾ, ಎನ್.ನಿಕಿತಾ–2, ಧರಣೀಶ್ವರಿ, ಸಿರಿ, ಬಿ.ಆರ್.ದೀಕ್ಷಿತಾ, ಅಬಿಗೈಲ್ ಪಿ.ಡಿಸೋಜಾ–3.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.