ADVERTISEMENT

ರೈತರಂತೆ ನಟಿಸುವವರನ್ನು ಮನವೊಲಿಸಲು ಸಾಧ್ಯವಿಲ್ಲ: ಶೋಭಾ ಕರಂದ್ಲಾಜೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 8:06 IST
Last Updated 17 ಆಗಸ್ಟ್ 2021, 8:06 IST
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ   

ಮೈಸೂರು: ‘ರೈತರ ಮನವೊಲಿಸಬಹುದು. ಆದರೆ, ರೈತರಂತೆ ನಟಿಸುವವರ ಮನವೊಲಿಸಲು ಸಾಧ್ಯವಿಲ್ಲ. ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವು ದಲ್ಲಾಳಿಗಳು ಹಾಗೂ ಮಧ್ಯವರ್ತಿಗಳ ಹೋರಾಟವಾಗಿದೆ’ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಟೀಕಿಸಿದರು.

‘11 ಸುತ್ತಿನ ಮಾತುಕತೆ ನಡೆದಿದ್ದು, ಯಾವುದೇ ವಿಚಾರ ಒಪ್ಪಿಕೊಳ್ಳದ ಮನಸ್ಥಿತಿ ರೈತ ಮುಖಂಡರದ್ದು. ಪಂಜಾಬ್‌ನಲ್ಲಿ ಎಪಿಎಂಸಿಯ ದೊಡ್ಡ ಲಾಬಿ ನಡೆಯುತ್ತಿದೆ. ರೈತರನ್ನು ವಂಚಿಸುತ್ತಿರುವ ಮಧ್ಯವರ್ತಿಗಳು ಧರಣಿ ಕುಳಿದಿದ್ದಾರೆ. ಕಮಿಷನ್‌ ತಪ್ಪಿ ಹೋಗುವ ಆತಂಕ ಅವರನ್ನು ಕಾಡುತ್ತಿದೆ’ ಎಂದು ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಇಷ್ಟು ದಿನ ರೈತರ ಕೈಗಳಿಗೆ ಹಾಕಿದ್ದ ಬೇಡಿಯನ್ನು ಪ್ರಧಾನಿ ಮೋದಿ ಕಳಚಿದ್ದಾರೆ. ಯಾವುದೇ ಉದ್ದೇಶದಿಂದ ಧರಣಿ ನಡೆಸುತ್ತಿದ್ದರೂ ಮುಖಂಡರೊಂದಿಗೆ ಮಾತುಕತೆ ಮುಂದುವರಿಸುತ್ತೇವೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.