ADVERTISEMENT

ರಾಯಚೂರು ಜಿಲ್ಲೆಯಲ್ಲಿ ಮತ್ತೆ ಮಳೆ: ಭತ್ತ‌ ಬೆಳೆ ಎಲ್ಲವೂ ನೀರುಪಾಲು

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2021, 6:27 IST
Last Updated 24 ನವೆಂಬರ್ 2021, 6:27 IST
ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಮೇದಿನಾಪುರ ಗ್ರಾಮದಲ್ಲಿ ನೆಲಕಚ್ಚಿದ ಭತ್ತದ ಬೆಳೆ
ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಮೇದಿನಾಪುರ ಗ್ರಾಮದಲ್ಲಿ ನೆಲಕಚ್ಚಿದ ಭತ್ತದ ಬೆಳೆ   

ರಾಯಚೂರು: ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಹೋಬಳಿಯಲ್ಲಿ ಮಂಗಳವಾರ ರಾತ್ರಿ ಆಲಿಕಲ್ಲು ಮಳೆ‌ ಸುರಿದಿದ್ದು, ಭತ್ತದ ಬೆಳೆ ಎಲ್ಲವೂ ನೀರುಪಾಲಾಗಿದೆ.

ಮ್ಯಾಕಲ್ ದೊಡ್ಡಿ, ಮೇದಿನಾಪುರ, ಗಲಗ ಹಾ ಕ‌ರಡಿಗುಡ್ಡ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಷ್ಟಪಟ್ಟು ಬೆಳೆದಿದ್ದ ಭತ್ತದ ಗದ್ದೆಗಳ ಎದುರು ರೈತರು ಅಸಹಾಯಕರಾಗಿ ಸಂಕಷ್ಟ ವ್ಯಕ್ತಪಡಿಸುತ್ತಿದ್ದಾರೆ.

'ಒಂದು ಎಕರೆಗೆ ₹25 ಸಾವಿರ‌ ಖರ್ಚು ಮಾಡಿ 3.5 ಎಕರೆ ಭತ್ತ ಬೆಳೆದಿರುವುದು ಮಳೆಯಿಂದ ಸಂಪೂರ್ಣ ‌ನೆಲಕ್ಕೆ‌ ಮಲಗಿದೆ. ಸರ್ಕಾರವು ಪ್ರತಿ ಎಕರೆಗೆ ₹40 ಸಾವಿರ ಪರಿಹಾರ ನೀಡಿ ರೈತರು ಬದುಕುತ್ತಾರೆ' ಎಂದು ಜಾಲಹಳ್ಳಿ ರೈತ ಮಲ್ಲಿಕ್ ಅಹ್ಮದ್ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT