ಕವಿತಾಳ: ನರೇಗಾ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಕಡಿಮೆ ಕೂಲಿ ಪಾವತಿಸಿದ್ದಾರೆ ಎಂದು ಆರೋಪಿಸಿ ಇಲ್ಲಿಗೆ ಸಮೀಪದ ಅಮೀನಗಡ ಗ್ರಾಮ ಪಂಚಾಯಿತಿ ಎದುರು ಕಾರ್ಮಿಕರು ಸೋಮವಾರ ಆಕ್ರೋಶ ವ್ಯಕ್ತಪಡಿಸಿದರು.
‘ಗ್ರಾಮದ ಹುಲಿಗುಡ್ಡ ಕೆರೆಯಲ್ಲಿ ಒಂದು ವಾರ ನೆಲ ಅಗೆಯುವ ಕೆಲಸ ಮಾಡಿದ್ದೇವೆ. ತಲಾ ₹180 ಪಾವತಿ ಮಾಡಿದ್ದಾರೆ. ಈ ಹಿಂದೆ ಅದೇ ರೀತಿ ಕೆಲಸ ಮಾಡಿದ ಕಾರ್ಮಿಕರಿಗೆ ಹೆಚ್ಚಿನ ಮೊತ್ತ ಪಾವತಿಸಿದ್ದಾರೆ’ ಎಂದು ಕಾರ್ಮಿಕರಾದ ದುರುಗಮ್ಮ, ಖಾಜಾಬೀ, ಶಂಕ್ರಮ್ಮ, ಆದಮ್ಮ, ಬಾಷಾಮಿಯಾ, ಬಸಲಿಂಗಪ್ಪ, ಶೇಖರಪ್ಪ, ಪದ್ಮಾವತಿ, ಸರಸ್ವತಿ, ದೇವಮ್ಮ ಇಮಾಮ್ ಸಾಬ್ ಮತ್ತಿತರರು ಆರೋಪಿಸಿದರು.
‘ಈ ಬಗ್ಗೆ ಚರ್ಚಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಮೊಬೈಲ್ ಕರೆ ಮಾಡಿದರೂ ಅವರು ಕರೆ ಸ್ವೀಕರಿಸುತ್ತಿಲ್ಲ’ ಎಂದು ಕಾರ್ಮಿಕರು ದೂರಿದರು.
‘ಕೆಲಸದ ಅಳತೆ ಆಧರಿಸಿ ತಲಾ ₹195 ವೇತನ ಪಾವತಿ ಮಾಡಲಾಗಿದೆ. ಈ ಕುರಿತು ಎಂಜಿನಿಯರ್ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಅಭಿವೃದ್ದಿ ಅಧಿಕಾರಿ ರಾಮಣ್ಣ ನಡಿಗೇರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.