ADVERTISEMENT

ರಾಯಚೂರು |ಈದ್ ಮಿಲಾದ್ ಆಚರಣೆಯಲ್ಲಿ ‘ಮಾನವೀಯ ಮೌಲ್ಯ ಸಾರಿದ ಪೈಗಂಬರರು’

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 5:32 IST
Last Updated 6 ಸೆಪ್ಟೆಂಬರ್ 2025, 5:32 IST
   

ಸಿಂಧನೂರು: ‘ಸಮಾಜಕ್ಕೆ ಸಮಾನತೆ ಮತ್ತು ಮಾನವೀಯ ಮೌಲ್ಯ ಬೋಧಿಸಿದ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರು ಸಾಮಾಜಿಕ ಪರಿವರ್ತನೆಯ ಹರಿಕಾರರು. ಅವರ ನಡೆ-ನುಡಿ ಸಿದ್ಧಾಂತ ಇಂದಿಗೂ ಪ್ರಸ್ತುತವಾಗಿವೆ’ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ನಗರದ ಮಹಿಬೂಬಿಯಾ ಕಾಲೊನಿಯಲ್ಲಿರುವ ನೂರಾನಿ ಮಸೀದಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರವಾದಿ ಮುಹಮ್ಮದ್ ಪೈಗಂಬರರ ಜನ್ಮದಿನದ ಅಂಗವಾಗಿ ಈದ್ ಮಿಲಾದುನ್ನಬೀ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶ್ರೇಷ್ಠ ದಾರ್ಶನಿಕ ಪುರಷರಲ್ಲಿ ಪೈಗಂಬರರು ಒಬ್ಬರಾಗಿದ್ದು, ಮೂಢನಂಬಿಕೆ, ಅರಾಜಕತೆ ವಿರುದ್ಧ ಹೋರಾಡಿ ಮೆಟ್ಟಿ ಸಮಾಜ ಸುಧಾರಣೆಗೆ ಶ್ರಮಿಸಿದ್ದಾರೆ. ಎಲ್ಲ ದಾರ್ಶನಿಕರು ಸಹ ಶಾಂತಿ, ಸೌಹಾರ್ದತೆ, ಸಾಮರಸ್ಯ, ಸಮಾನತೆಯ ಸಂದೇಶ ಸಾರಿದ್ದಾರೆ’ ಎಂದರು.

ADVERTISEMENT

ಮಾಜಿ ಸಚಿವ ವೆಂಕಟರಾವ ನಾಡಗೌಡ ಮಾತನಾಡಿ, ‘ಪೈಗಂಬರರು, ಮುಸ್ಲಿಮರಿಗೆ ಮಾತ್ರ ಸೀಮಿತವಲ್ಲ. ಮನುಕುಲದ ಒಳಿತಿಗೆ ತತ್ವ-ಸಂದೇಶ ಸಾರಿದ್ದಾರೆ. ದಾರ್ಶನಿಕರು, ದ್ವೇಷ, ಅಸೂಯೆ, ಗಲಭೆ ಮಾಡು ಎಂದು ಹೇಳಿಲ್ಲ. ಆದರೆ ಮಾನವೀಯ ಮೌಲ್ಯ ಮತ್ತು ಸಂಸ್ಕಾರವನ್ನು ಮರೆತ ಕೆಲ ದುಷ್ಕರ್ಮಿಗಳಿಂದ ಅನಾಹುತಗಳು ನಡೆದು ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ’ ಎಂದು ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುಗೌಡ ಬಾದರ್ಲಿ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಮುಖಂಡರಾದ ಬಾಬರ್‍ಪಾಷಾ ಜಾಗೀರದಾರ, ಹಾರೂನ್‍ಪಾಷಾ ಜಾಗೀರದಾರ, ಶಖಣ್ಣ ಏತ್ಮಾರಿ, ಟಿ.ಹುಸೇನಸಾಬ, ಅಬ್ದುಲ್ ಗನಿಸಾಬ ವಕೀಲ, ಕೆ.ಜಿಲಾನಿಪಾಷ, ಹಾಜಿಮಸ್ತಾನ್, ಪ್ರಭುರಾಜ್, ಖಾಜಿಮಲಿಕ್ ವಕೀಲ, ವೆಂಕಣ್ಣ ಜೋಶಿ, ವೀರಭದ್ರಗೌಡ ಅಮರಾಪುರ, ಎಚ್.ಎನ್.ಬಡಿಗೇರ, ಸಂಜಯ ಪಾಟೀಲ, ಶಿವಕುಮಾರ ಜವಳಿ, ವೆಂಕಟೇಶ ರಾಗಲಪರ್ವಿ, ಶಿವಕುಮಾರ ಗುಂಜಳ್ಳಿ, ತಿಮ್ಮಣ್ಣ ಸಾಹುಕಾರ ಕುರುಕುಂದಾ, ಎಂ.ಡಿ. ಅಲ್ತಾಫ್, ಮುಸ್ತಫಾ, ಮುರ್ತುಜಾಹುಸೇನ್, ಫಯಾಜ್ ಪೀರಾ, ಅಬ್ದುಲ್ ಖದೀರ್, ಸಿದ್ದು ಹೂಗಾರ, ಅಂಬಿರಾಜ್ ಮ್ಯಾಕಲ್, ಡಿವೈಎಸ್‍ಪಿ ಬಿ.ಎಸ್.ತಳವಾರ, ಪೊಲೀಸ್ ಇನ್ಸ್‍ಪೆಕ್ಟರ್ ರಾಜಕುಮಾರ ವಾಜಂತ್ರಿ, ಎಸ್ಐಗಳಾದ ಎರಿಯಪ್ಪ ಅಂಗಡಿ, ಮೌನೇಶ ರಾಠೋಡ, ಸುಜಾತ ನಾಯಕ ಸೇರಿದಂತೆ ಅನೇಕ ಮುಸ್ಲಿಂ ಮುಖಂಡರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.