ADVERTISEMENT

ಟಿಟಿಡಿಯಿಂದ ಬಂದ ಶ್ರೀವಾರಿ ವಸ್ತ್ರ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 8:27 IST
Last Updated 24 ಫೆಬ್ರುವರಿ 2026, 8:27 IST
ಶ್ರೀ ರಾಘವೇಂದ್ರ ಸ್ವಾಮಿಗಳ 405ನೇ ಪಟ್ಟಾಭಿಷೇಕ ಮಹೋತ್ಸವದ ಪ್ರಯುಕ್ತ ಮಂತ್ರಾಲಯದ ಶ್ರೀ ಯೋಗೀಂದ್ರ ಸಭಾ ಭವನದಲ್ಲಿ ನಡೆದ ಶ್ರೀ ರಾಘವೇಂದ್ರ ಗುರುವೈಭವೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರು
ಶ್ರೀ ರಾಘವೇಂದ್ರ ಸ್ವಾಮಿಗಳ 405ನೇ ಪಟ್ಟಾಭಿಷೇಕ ಮಹೋತ್ಸವದ ಪ್ರಯುಕ್ತ ಮಂತ್ರಾಲಯದ ಶ್ರೀ ಯೋಗೀಂದ್ರ ಸಭಾ ಭವನದಲ್ಲಿ ನಡೆದ ಶ್ರೀ ರಾಘವೇಂದ್ರ ಗುರುವೈಭವೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರು   

ರಾಯಚೂರು: ಶ್ರೀ ರಾಘವೇಂದ್ರ ಸ್ವಾಮಿಗಳ 405ನೇ ಪಟ್ಟಾಭಿಷೇಕ ಮಹೋತ್ಸವದ ಪ್ರಯುಕ್ತ ನಡೆಯುತ್ತಿರುವ ಶ್ರೀ ರಾಘವೇಂದ್ರ ಗುರುವೈಭವೋತ್ಸವಕ್ಕೆ ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ) ಬೊಕ್ಕಸಂ ಅಧೀಕ್ಷಕ ಗುರುರಾಜಾಚಾರ್ ಅವರು ತಿರುಮಲ ತಿರುಪತಿ ದೇವಸ್ಥಾನಗಳಿಂದ ಪವಿತ್ರ ಶ್ರೀವಾರಿ ವಸ್ತ್ರದೊಂದಿಗೆ ಆಗಮಿಸಿದರು.

ಟಿಟಿಡಿ ಅಧಿಕಾರಿಗಳು ಮತ್ತು ಪಂಡಿತರನ್ನು ಮಾಧ್ವ ಕಾರಿಡಾರ್ ಮೂಲಕ ಶ್ರೀ ಮಠಕ್ಕೆ ತೆರಳುವ ಮೊದಲು ಮಹಾದ್ವಾರದಲ್ಲಿ ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಯಿತು.

ಗುರುರಾಜಾಚಾರ್ ಅವರು ಪವಿತ್ರ ವಸ್ತ್ರವನ್ನು ಶ್ರೀ ರಾಯರ ಮೂಲ ಬೃಂದಾವನಕ್ಕೆ ಭಕ್ತಿಪೂರ್ವಕವಾಗಿ ಅರ್ಪಿಸಿದರು.

ADVERTISEMENT

ಕಾಣಿಕೆ ನೀಡಿದ ನಂತರ, ಟಿಟಿಡಿ ಅಧಿಕಾರಿಗಳು ಶ್ರೀವಾರಿ ಶೇಷವಸ್ತ್ರ ಮತ್ತು ಪ್ರಸಾದವನ್ನು ಸ್ವಾಮೀಜಿ ಅವರಿಗೆ ಅರ್ಪಿಸಿದರು. ಪರಸ್ಪರ ಗೌರವದ ಸಂಕೇತವಾಗಿ ಗುರುರಾಜಾಚಾರ್ ಮತ್ತು ಅವರ ಜೊತೆಗಿದ್ದ ಅಧಿಕಾರಿಗಳನ್ನು ಆಶೀರ್ವದಿಸಿ, ಶೇಷವಸ್ತ್ರ, ಸ್ಮರಣಿಕೆ ಮತ್ತು ಫಲಮಂತ್ರಾಕ್ಷತೆ ನೀಡಿ ಗೌರವಿಸಿದರು.

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಶ್ರೀಶಾನಂದ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.