ADVERTISEMENT

ಹಾರೋಹಳ್ಳಿ: ಡೇರಿ ಕಟ್ಟಡಕ್ಕೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2023, 5:33 IST
Last Updated 21 ನವೆಂಬರ್ 2023, 5:33 IST
ಹಾರೋಹಳ್ಳಿ ತಾಲೂಕಿನ ಮರಳವಾಡಿಯ ಯಡುವನಹಳ್ಳಿ ಗ್ರಾಮದ ಹಾಲು ಉತ್ಪದಕ ಸಹಕಾರ ಸಂಘದ ಕಟ್ಟಡಕ್ಕೆ ಭಾನುವಾರ ಶಾಸಕ ಇಕ್ಬಾಲ್ ಹುಸೇನ್  ಭೂಮಿಪೂಜೆ ನೆರವೇರಿಸಿದರು
ಹಾರೋಹಳ್ಳಿ ತಾಲೂಕಿನ ಮರಳವಾಡಿಯ ಯಡುವನಹಳ್ಳಿ ಗ್ರಾಮದ ಹಾಲು ಉತ್ಪದಕ ಸಹಕಾರ ಸಂಘದ ಕಟ್ಟಡಕ್ಕೆ ಭಾನುವಾರ ಶಾಸಕ ಇಕ್ಬಾಲ್ ಹುಸೇನ್  ಭೂಮಿಪೂಜೆ ನೆರವೇರಿಸಿದರು   

ಹಾರೋಹಳ್ಳಿ: ಯಡುವನಹಳ್ಳಿಯಲ್ಲಿ ಭಾನುವಾರ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡಕ್ಕೆ ಶಾಸಕ ಇಕ್ಬಾಲ್ ಹುಸೇನ್ ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಹೈನುಗಾರಿಕೆಯನ್ನು ನಂಬಿಕೊಂಡು ಅದೆಷ್ಟೋ ಮಂದಿ ಜೀವನ ನಡೆಸುತ್ತಿದ್ದಾರೆ. ಮಹಿಳೆಯರ ಆರ್ಥಿಕಾಭಿವೃಧ್ಧಿಗೆ ಹೈನುಗಾರಿಕೆ ವರವಾಗಿದ್ದು ಬಮೂಲ್‌ನಿಂದ ದೊರೆಯುವ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಬೇಕು. ಜಿಲ್ಲೆಯು ರೇಷ್ಮೆ ಮತ್ತು ಹಾಲಿಗೆ (ಸಿಲ್ಕ್‌–ಮಿಲ್ಕ್‌) ಹೆಸರುವಾಸಿಯಾಗಿದೆ. ಅಂತೆಯೇ ಅದಕ್ಕೆ ತಕ್ಕಂತೆ ಸೌಲಭ್ಯಗಳನ್ನು ಒದಗಿಸಲಾಗುವುದು.  ನಿರುದ್ಯೋಗಿಗಳು ಹೈನುಗಾರಿಕೆ ಕೈಗೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

ಬಮೂಲ್ ನಿರ್ದೇಶಕ ಹರೀಶ್ ಕುಮಾರ್, ಸಹಕಾರ ಸಂಘದ ಅಧ್ಯಕ್ಷ ಅಣ್ಣಯ್ಯ, ಭೈರಲಿಂಗಣ್ಣ, ಶಾಮಣ್ಣ, ಕೇಬಲ್ ರವಿ, ಶ್ರೀನಿವಾಸ್, ಕುಮಾರ್ ರಾವ್, ದೇವರಾಜು, ರಾಮಚಂದ್ರ, ಕಾರ್ಯದರ್ಶಿ ನರಸೇಗೌಡ ಇನ್ನಿತರರು ಹಾಆಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.