ADVERTISEMENT

ದೇಶಿ ವಿಳಾಸದ ಆಧಾರ್ ಕಾರ್ಡ್‌ ಹೊಂದಿರುವ ಆರೋಪಿಗಳು: 7 ಬಾಂಗ್ಲಾ ವಲಸಿಗರು ವಶಕ್ಕೆ

ಬಾಂಗ್ಲಾ ಅಕ್ರಮ ವಲಸಿಗರು

​ಪ್ರಜಾವಾಣಿ ವಾರ್ತೆ
Published 12 ಜುಲೈ 2022, 15:22 IST
Last Updated 12 ಜುಲೈ 2022, 15:22 IST
ರಾಮನಗರ ಜಿಲ್ಲೆಯಲ್ಲಿ ಅಕ್ರಮವಾಗಿ ನೆಲೆಸಿದ್ದ ಏಳು ಬಾಂಗ್ಲಾದೇಶ ನಿವಾಸಿಗಳು ಪೊಲೀಸರ ವಶ
ರಾಮನಗರ ಜಿಲ್ಲೆಯಲ್ಲಿ ಅಕ್ರಮವಾಗಿ ನೆಲೆಸಿದ್ದ ಏಳು ಬಾಂಗ್ಲಾದೇಶ ನಿವಾಸಿಗಳು ಪೊಲೀಸರ ವಶ   

ರಾಮನಗರ: ಜಿಲ್ಲೆಯಲ್ಲಿ ಅಕ್ರಮವಾಗಿ ನೆಲೆಸಿದ್ದ ಏಳು ಬಾಂಗ್ಲಾದೇಶ ನಿವಾಸಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅವರನ್ನು ಸ್ವದೇಶಕ್ಕೆ ಕಳುಹಿಸಲು ಸಿದ್ಧತೆ ನಡೆಸಿದ್ದಾರೆ.

ಇಲ್ಲಿನ ಬಸವನಪುರ ಗ್ರಾಮದಲ್ಲಿರುವ ಲಿಂಕ್‌ಅಪ್‌ ಗಾರ್ಮೆಂಟ್ಸ್‌ನಲ್ಲಿ ಬಾಂಗ್ಲಾ ದೇಶಿಯರು ಅಕ್ರಮವಾಗಿ ನೆಲೆಸಿ ಕೆಲಸ ಮಾಡುತ್ತಿರುವ ದೂರಿನ ಮೇರೆಗೆ ಗ್ರಾಮೀಣ ಠಾಣೆ ಪೊಲೀಸರ ತಂಡವು ದಾಳಿ ನಡೆಸಿತು. ಮೊಹಮ್ಮದ್‌ ಸೊಹಿಲ್‌ ರಾಣ (34), ಜುಲ್ಫಿಕರ್ ಅಲಿ (34), ಉಜಾಲ್‌ ಮೊಹಮ್ಮದ್‌ ರಾಣಾ (30), ಮಿನ್ಹಾಜುಲ್‌ ಹುಸೇನ್‌ (25), ಮುಸ್ಸಾ ಶೇಖ್‌ (27), ರಹೀಂ (27), ಆರೀಫುಲ್‌ ಇಸ್ಲಾಂ (27) ಎಂಬುವರನ್ನು ವಶಕ್ಕೆ ಪಡೆಯಲಾಗಿದೆ. ಮತ್ತೊಬ್ಬ ಮಹಿಳೆ ತಲೆಮರಿಸಿಕೊಂಡಿದ್ದಾರೆ ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಆರೋಪಿಗಳ ಬಳಿ ಒಡಿಶಾ, ಅಸ್ಸಾಂ, ಪಶ್ಚಿಮ ಬಂಗಾಳ ರಾಜ್ಯಗಳ ವಿಳಾಸಗಳು ಇರುವ ಆಧಾರ್ ಕಾರ್ಡ್‌ಗಳು ಪತ್ತೆಯಾಗಿವೆ. ಅದರ ಮೂಲಕವೇ ಅವರು ಸ್ಥಳೀಯರೆಂದು ಪರಿಚಯಿಸಿಕೊಂಡು ಉದ್ಯೋಗ ಗಟ್ಟಿಸಿಕೊಂಡಿದ್ದಾರೆ. ಇದರೊಟ್ಟಿಗೆ ಬಾಂಗ್ಲಾದೇಶ ವಿಳಾಸ ಇರುವ ಗುರುತಿನ ಚೀಟಿಗಳೂ ಸಿಕ್ಕಿವೆ.

ADVERTISEMENT

ಏಜೆಂಟರ ಮೂಲಕ ಪ್ರವೇಶ: ‘ತಮಿಳುನಾಡು ಮೂಲದ ಏಜೆಂಟ್‌ ಮೂಲಕ ಅಕ್ರಮವಾಗಿ ಭಾರತಕ್ಕೆ ಪ್ರವೇಶ ಮಾಡಿದ್ದ ಆರೋಪಿಗಳು ಕಳೆದ ಜೂನ್‌ನಲ್ಲಿ ರಾಮನಗರದ ಕಾರ್ಖಾನೆಯಲ್ಲಿ ಉದ್ಯೋಗ ಪಡೆದಿದ್ದರು. ಬಸವನಪುರದಲ್ಲೇ ಮನೆ ಬಾಡಿಗೆಗೆ ಪಡೆದು ವಾಸವಿದ್ದರು.ಆರೋಪಿಗಳ ಮೇಲೆ ಕಣ್ಣಿಟ್ಟಿದ್ದ ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಬಾಂಗ್ಲಾದೇಶ ಮೂಲದ ದಾಖಲೆಗಳು ಪತ್ತೆ ಆಗಿವೆ. ಇದೀಗ ಅವರನ್ನು ಎಫ್‌ಆರ್‌ಆರ್‌ ವಶಕ್ಕೆ ನೀಡಲಾಗಿದೆ. ಸ್ವದೇಶಕ್ಕೆ ಕಳುಹಿಸುವ ಕಾನೂನು ಪ್ರಕ್ರಿಯೆ ನಡೆದಿದೆ’ ಎಂದು ಎಸ್ಪಿ ಮಾಹಿತಿ ನೀಡಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.