ADVERTISEMENT

ದೇವಾಲಯಗಳಲ್ಲಿ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2020, 12:43 IST
Last Updated 1 ಜನವರಿ 2020, 12:43 IST
ಕನಕಪುರ ತಾಲ್ಲೂಕಿನ ಬಸವನ ಬನ್ನಿಕುಪ್ಪೆ ದೇವಾಲಯದಲ್ಲಿ ಬಸವೇಶ್ವರ ದೇವರಿಗೆ ಪೂಜೆ ನೆರವೇರಿಸಿದರು
ಕನಕಪುರ ತಾಲ್ಲೂಕಿನ ಬಸವನ ಬನ್ನಿಕುಪ್ಪೆ ದೇವಾಲಯದಲ್ಲಿ ಬಸವೇಶ್ವರ ದೇವರಿಗೆ ಪೂಜೆ ನೆರವೇರಿಸಿದರು   

ಕನಕಪುರ: ನೂತನ ವರ್ಷಾಚರಣೆ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ತಾಲ್ಲೂಕಿನ ಪ್ರಮುಖ ದೇವಾಲಯಗಳಿಗೆ ಕುಟುಂಬ ಸಮೇತರಾಗಿ ತೆರಳಿ ವಿಶೇಷ ಪೂಜೆಯನ್ನು ನೆರವೇರಿಸಿದರು.

ತಾಲ್ಲೂಕಿನಾದ್ಯಂತ ಜನತೆ ಮಂಗಳವಾರ ಮಧ್ಯರಾತ್ರಿ ಸಂಭ್ರಮಾಚರಣೆ ಮಾಡಿ 2020 ನ್ನು ಸ್ವಾಗತಿಸಿದರು. ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ.

ಕಲ್ಲಹಳ್ಳಿ ಶ್ರೀನಿವಾಸ, ಶಿವನಹಳ್ಳಿ ವೀರಭದ್ರಸ್ವಾಮಿ, ಬಸವನ ಬನ್ನಿಕುಪ್ಪೆ ಬಸವೇಶ್ವರಸ್ವಾಮಿ, ಮಳಗಾಳು ಈಶ್ವರನ ದೇವಾಲಯ, ಬಸ್‌ ನಿಲ್ದಾಣದ ಆಂಜನೇಯಸ್ವಾಮಿ ಹಾರೋಹಳ್ಳಿ ಅರುಣಾಚಲೇಶ್ವರ, ಬಟ್ಟಲುಗುಂಡಪ್ಪ ದೇವಾಲಯದಲ್ಲಿ ಹೊಸವರ್ಷದ ಹಿನ್ನೆಲೆಯಲ್ಲಿ ಭಕ್ತರು ಸಂಖ್ಯೆ ಹೆಚ್ಚಾಗಿತ್ತು.

ADVERTISEMENT

ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೊರಗಡೆ ಬಂದು ವರ್ಷಾಚರಣೆಯನ್ನು ಮಾಡುವವರ ಸಂಖ್ಯೆ ಕಡಿಮೆ ಇತ್ತು. ಬಹುತೇಕ ಜನತೆ ಮನೆಯಲ್ಲೇ ಕುಟುಂಬ ಸಮೇತರಾಗಿ ಸಂಭ್ರಮಾಚರಣೆಯನ್ನು ಮಾಡಿದ್ದಾರೆ. ಹಾಗಾಗಿ ಹೊರಗಡೆ ಯಾರೂ ಹೆಚ್ಚಾಗಿ ಬಂದಿಲ್ಲ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.