ADVERTISEMENT

ಹೊಸನಗರ | 'ವಾಲಿಬಾಲ್ ಜಾನ್' ವಿಲ್ಸನ್ ಗೋನ್ಸಾಲ್ವಿಸ್ ನಿಧನ

​ಪ್ರಜಾವಾಣಿ ವಾರ್ತೆ
Published 27 ಜೂನ್ 2023, 14:44 IST
Last Updated 27 ಜೂನ್ 2023, 14:44 IST
ಜಾನ್ ವಿಲ್ಸನ್ ಗೋನ್ಸಾಲ್ವಿಸ್‌
ಜಾನ್ ವಿಲ್ಸನ್ ಗೋನ್ಸಾಲ್ವಿಸ್‌   

ಹೊಸನಗರ: ಜೂನಿಯರ್ ವಿಭಾಗದಲ್ಲಿ ಕೆಲಕಾಲ ರಾಷ್ಟ್ರೀಯ ವಾಲಿಬಾಲ್ ತರಬೇತಿದಾರರಾಗಿ ಸೇವೆ ಸಲ್ಲಿಸಿದ್ದ, ವಾಲಿಬಾಲ್ ಜಾನ್‌ ಎಂದೇ ಹೆಸರುವಾಸಿಯಾಗಿದ್ದ ಪಟ್ಟಣದ ಕ್ರಿಶ್ಚಿಯನ್‌ ಕಾಲೊನಿ ನಿವಾಸಿ ಜಾನ್ ವಿಲ್ಸನ್ ಗೋನ್ಸಾಲ್ವಿಸ್ (59) ಶಿವಮೊಗ್ಗದಲ್ಲಿ ನಿಧನರಾದರು.

ಬ್ಯಾನರ್‌ ಬರೆದುಕೊಡುವ ಕಾಯಕದ ಜತೆಗೆ ಸ್ಥಳೀಯ ಖಾಸಗಿ ಶಾಲೆಗಳಲ್ಲಿ ವಾಲಿಬಾಲ್ ತರಬೇತುದಾರರಾಗಿ ಅನೇಕ ವಿದ್ಯಾರ್ಥಿಗಳನ್ನು ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಪಟುಗಳಾಗಿ ಪರಿವರ್ತಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಪಟ್ಟಣದ ಶ್ರೀನಿಧಿ ಫೈನಾನ್ಸ್‌ ಸ್ಪೋರ್ಟ್ಸ್‌ ಅಸೋಸಿಯೇಷನ್, ಕುವೆಂಪು ವಿದ್ಯಾಸಂಸ್ಥೆಯಲ್ಲಿ  ಸೇವೆ ಸಲ್ಲಿಸಿದ್ದರು.

ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.