ಚಿತ್ರ ಕೃಪೆ: @navin_ankampali
ಶಿವಮೊಗ್ಗ: ಮಳೆಗಾಲದಲ್ಲಿ ಜೋಗ ಜಲಪಾತ ನೋಡುವುದೇ ಕಣ್ಣಿಗೆ ಹಬ್ಬ. ಅದರಲ್ಲೂ ರಾಜ, ರಾಣಿ, ರೋರರ್, ರಾಕೆಟ್ ಒಟ್ಟಾಗಿ ಉಕ್ಕಿ ಹರಿಯುವ ದೃಶ್ಯವೇ ರೋಚಕ.
ಶರಾವತಿ ನದಿ ನೀರಿನ ಪಾತ್ರದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಆಣೆಕಟ್ಟೆಗೆ ಸಾಕಷ್ಟು ಸಂಖ್ಯೆಯಲ್ಲಿ ನೀರು ಹರಿದುಬರುತ್ತಿರುವ ಪರಿಣಾಮ ಕ್ರಸ್ಟ್ ಗೇಟ್ ತೆರೆಯಲಾಗಿದೆ. ಇದರಿಂದ ಜೋಗ ಜಲಪಾತ ತನ್ನ ಸಹಜ ಸೊಬಗಿಗಿಂತಲೂ ಮೈದುಂಬಿ ಧುಮ್ಮಿಕ್ಕುತ್ತಿದೆ.
ಆ ಸಂದರ್ಭದಲ್ಲಿ ಜೋಗದ ಸೊಬಗನ್ನು ಕಣ್ಣು ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಹರಿದು ಬರುತ್ತದೆ.
ಮುಂಗಾರಿನ ಸಂದರ್ಭದಲ್ಲಿ ರಜೆಯ ಮಜ ಸವಿಯು ಜೋಗ ಜಲಪಾತ ನೋಡಲು ಹೋದರೆ ರಾಜ, ರಾಣಿ, ರೋರರ್, ರಾಕೆಟ್ ಎಂಬ ನಾಲ್ಕು ಕವಲಾಗಿ ಪ್ರಪಾತಕ್ಕೆ ಧುಮ್ಮಿಕ್ಕುವ ಶರಾವತಿಯ ಸೊಬಗು ಬಾಹ್ಯ ಲೋಕವನ್ನೇ ಮರೆಯುವಂತೆ ಮಾಡುತ್ತದೆ.
ಜೋಗ ಜಲಪಾತ ಮೈದುಂಬಿ ಹರಿಯುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.