ADVERTISEMENT

ಮಹಿಷಿ ಉತ್ತರಾದಿ ಮಠ: ಮುಸುಕು ಹಾಕಿಕೊಂಡ ಬಂದು ದರೋಡೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2025, 9:29 IST
Last Updated 6 ಏಪ್ರಿಲ್ 2025, 9:29 IST
<div class="paragraphs"><p>ಮಹಿಷಿ ಉತ್ತರಾದಿ ಮಠ</p></div>

ಮಹಿಷಿ ಉತ್ತರಾದಿ ಮಠ

   

ತೀರ್ಥಹಳ್ಳಿ: ತಾಲ್ಲೂಕಿನ ಮಹಿಷಿ ಉತ್ತರಾದಿ ಮಠದಲ್ಲಿ ತಡರಾತ್ರಿ ದರೋಡೆ ನಡೆದಿದೆ. ರಾತ್ರಿ ಮಠಕ್ಕೆ ನುಗ್ಗಿದ ಮಂಕಿಕ್ಯಾಪ್ ಧರಿಸಿದ 10ಕ್ಕೂ ಹೆಚ್ಚು ದರೋಡೆಕೋರರು ಲಾಂಗು, ಮಚ್ಚು ತೋರಿಸಿ ಹೆದರಿಸಿ ಹಣ ದೋಚಿರುವ ಪ್ರಕರಣ ನಡೆದಿದೆ.

ಮಠದಲ್ಲಿ ಇದ್ದ ಒಂದು ಲ್ಯಾಪ್ ಟಾಪ್, 50,000 ನಗದು, 4 ಮೊಬೈಲ್ ಕಿತ್ತುಕೊಂಡು ತೆರಳಿದ್ದಾರೆ. ಅದೃಷ್ಟವಶಾತ್ ಯಾರಿಗೂ ತೊಂದರೆ ಮಾಡಿಲ್ಲ. ಚಿನ್ನಾಭರಣಗಳ ಕಳ್ಳತನ ನಡೆದಿಲ್ಲ ಎಂದು ತಿಳಿದು ಬಂದಿದೆ.

ADVERTISEMENT

ವಿಷಯ ತಿಳಿಯುತ್ತಿದ್ದಂತೆ ಮಾಳೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಭಾನುವಾರ ಬೆಳಿಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದು ವಿಚಾರಣೆ ನಡೆಸಿದ್ದಾರೆ.

ಸಿಸಿಟಿವಿ ಕ್ಯಾಮೆರಾ ಕೂಡ ಕಿತ್ತುಕೊಂಡು ಹೋಗಿದ್ದಾರೆಂಬ ಮಾಹಿತಿ ಲಭ್ಯವಾಗಿದ್ದು ದರೋಡೆಯಲ್ಲಿ ಸ್ಥಳೀಯರ ಕೈವಾಡ ಇದೆ ಎಂದು ಹೇಳಲಾಗುತ್ತಿದೆ.

ಈ ಸಂಬಂಧ ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.