ಶಿವಮೊಗ್ಗದ ಬಿ.ಎಂ. ಮೇಘನಾ (BM Meghana) ಲೋಕಸೇವಾ ಆಯೋಗದ 2024ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ (UPSC CSE ) 425ನೇ ರ‍್ಯಾಂಕ್ ಪಡೆದಿದ್ದಾರೆ. ಎಫ್‌ಡಿಎ ರೂಪದಲ್ಲಿ ಸರ್ಕಾರಿ ಹುದ್ದೆ ಸಿಕ್ಕಿದ್ದರೂ ಅದನ್ನು ಬಿಟ್ಟು, ಸತತ ಪರಿಶ್ರಮ ಹಾಕಿದ್ದರ ಪರಿಣಾಮ ಐದನೇ ಪ್ರಯತ್ನದಲ್ಲಿ ನಾಗರಿಕ ಸೇವೆ ಸೇರುವ ಅದೃಷ್ಟ ಅವರಿಗೆ ಒಲಿದಿದೆ. ಭರತನಾಟ್ಯ, ಸಂಗೀತ ಹಾಗೂ ಗಮಕ ಗಾಯನದ ಜೊತೆಗೆ ಶಿವಮೊಗ್ಗದ ‘ಹೊಂಗಿರಣ’ ಸಂಸ್ಥೆಯ ಮೂಲಕ ರಂಗ ಚಟುವಟಿಕೆಗಳಲ್ಲೂ ತೊಡಗಿಕೊಂಡಿರುವ ಮೇಘನಾ, ಈ ವಿಡಿಯೊದಲ್ಲಿ ಯುಪಿಎಸ್‌ಸಿ ಪರೀಕ್ಷಾರ್ಥಿಗಳಿಗೆ ಅನೇಕ ಟಿಪ್ಸ್ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.