
ಪ್ರಜಾವಾಣಿ ವಾರ್ತೆ
ಕೊರಟಗೆರೆ: ಪಟ್ಟಣದ ಹೊರ ವಲಯದ ಕಾವಲಬೀಳು ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ.
ಇತ್ತೀಚೆಗೆ ಪಟ್ಟಣದ ಜನವಸತಿ ಪ್ರದೇಶ ಸೇರಿದಂತೆ ಹೊರವಲಯದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಜತೆಗೆ ನಾಯಿಗಳನ್ನು ಕೊಂದಿತ್ತು. ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಅರಣ್ಯ ಇಲಾಖೆ ಪಟ್ಟಣದ ಕೂಗಳತೆ ದೂರದ ಕಾವಲುಬೀಳು ಬಳಿ ಬೋನು ಇಡಲಾಗಿತ್ತು. ರಾತ್ರಿ ಸಮಯದಲ್ಲಿ ಬೋನಿಗೆ ಬಿದ್ದಿದ್ದು, ಹೊರಬರಲಾಗದೇ ಚೀರಾಡುತ್ತಿದ್ದ ವೇಳೆ ಸಾರ್ವಜನಿಕರ ಗಮನಕ್ಕೆ ಬಂದಿದೆ. ಮಹಿಳೆಯರು, ಮಕ್ಕಳು ಸೇರಿದಂತೆ ಜನ
ಬೋನಿಗೆ ಬಿದ್ದ ಚಿರತೆಯನ್ನು ನೋಡಲು ಮುಗಿಬಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.