ADVERTISEMENT

ತುಮಕೂರಿನ ಪ್ರಜ್ಞಾಸತೀಶ್ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 3ನೇ ಟಾಪರ್

ಜಿಲ್ಲೆಗೆ 17ನೇ ಸ್ಥಾನ 

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 10:11 IST
Last Updated 15 ಏಪ್ರಿಲ್ 2019, 10:11 IST
ಪ್ರಜ್ಞಾಸತೀಶ್
ಪ್ರಜ್ಞಾಸತೀಶ್    

ತುಮಕೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತುಮಕೂರು ಜಿಲ್ಲೆಯು ಶೇ 65.81 ರಷ್ಟು ಫಲಿತಾಂಶ ಗಳಿಸಿದ್ದು, ರಾಜ್ಯ ಮಟ್ಟದಲ್ಲಿ 17ನೇ ಸ್ಥಾನಗಳಿಸಿದೆ.

ವಿದ್ಯಾವಾಹಿನಿ ಪಿಯು ಕಾಲೇಜಿನ ಪ್ರಜ್ಞಾಸತೀಶ್ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 594 ಅಂಕಗಳಿಸಿ ರಾಜ್ಯಕ್ಕೆ 3ನೇ ಟಾಪರ್ ಎನಿಸಿದ್ದಾರೆ.

ಕಳೆದ ವರ್ಷ (2018) ಶೇ 64.29 ಫಲಿತಾಂಶ ಗಳಿಸಿ ರಾಜ್ಯ ಮಟ್ಟದಲ್ಲಿ 21ನೇ ಸ್ಥಾನ ಪಡೆದಿತ್ತು. 2017ರಲ್ಲಿ 22ನೇ ಸ್ಥಾನವನ್ನು ಜಿಲ್ಲೆಯು ‍ಪಡೆದಿತ್ತು.

ADVERTISEMENT

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.