ADVERTISEMENT

ಗಂಗೊಳ್ಳಿ: ಮೀನುಗಾರಿಕಾ ದೋಣಿ ಮಗುಚಿ ಮೂವರು ನಾಪತ್ತೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 6:33 IST
Last Updated 15 ಜುಲೈ 2025, 6:33 IST
<div class="paragraphs"><p>ಗಂಗೊಳ್ಳಿ ಅಳಿವೆ ಪ್ರದೇಶ</p></div>

ಗಂಗೊಳ್ಳಿ ಅಳಿವೆ ಪ್ರದೇಶ

   

ಕುಂದಾಪುರ (ಉಡುಪಿ): ಮೀನುಗಾರಿಕೆಗೆ ತೆರೆಳಿದ್ದ ದೋಣಿಯೊಂದು ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಮಂಗಳವಾರ ಮಗುಚಿ ಮೂವರು ಮೀನುಗಾರರು ನಾಪತ್ತೆಯಾಗಿದ್ದು, ಒಬ್ಬರನ್ನು ರಕ್ಷಣೆ ಮಾಡಲಾಗಿದೆ.

ಗಂಗೊಳ್ಳಿಯ ಮೀನುಗಾರರಾದ ಸಿಪಾಯಿ ಸುರೇಶ್ ಖಾರ್ವಿ, ಜಗನ್ನಾಥ್ ಖಾರ್ವಿ ಹಾಗೂ ಲೋಹಿತ್ ಖಾರ್ವಿ ನಾಪತ್ತೆಯಾದವರು.

ADVERTISEMENT

ದೋಣಿಯಲ್ಲಿದ್ದ ಸಂತೋಷ ಖಾರ್ವಿ ಎಂಬುವವರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ.

ಮೀನುಗಾರಿಕೆಗೆ ತೆರಳಿದ್ದ ಇವರು ಸಮುದ್ರದಲ್ಲಿ ಭಾರಿ ತೂಫಾನ್ ಎದ್ದ ಪರಿಣಾಮವಾಗಿ ಮೀನುಗಾರಿಕೆ ನಡೆಸದೆ ಹಿಂದಿರುಗುತ್ತಿದ್ದಾಗ ಗಂಗೊಳ್ಳಿ ಅಳಿವೆಯ ಹೊರ ಭಾಗದಲ್ಲಿ ದೋಣಿ ಮಗುಚಿದೆ.

ಸ್ಥಳೀಯ ಮೀನುಗಾರರ ಸಹಕಾರದಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಗಾಳಿ ಸಹಿತ ಭಾರಿ ಮಳೆಯಾಗುತ್ತಿರುವುದರಿಂದ ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳು ಏಳುತ್ತಿದ್ದು, ಕಾರ್ಯಾಚರಣೆಗೆ ತೊಡಕಾಗಿದೆ ಎಂದು ಸ್ಥಳೀಯ ಮೀನುಗಾರ ಮುಖಂಡ ರಾಮಪ್ಪ ಖಾರ್ವಿ ತಿಳಿಸಿದ್ದಾರೆ.

ಲೋಹಿತ್ ಖಾರ್ವಿ, ಜಗನ್ನಾಥ್ ಖಾರ್ವಿ, ಸುರೇಶ್ ಖಾರ್ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.