
ಬೈಂದೂರು: ದಿ. ವೆಂಕಟ ಪೂಜಾರಿ ಸಸಿಹಿತ್ಲು ಅವರ ಸವಿ ನೆನಪಿಗಾಗಿ ಜ. 21ರಂದು ಕಳವಾಡಿಯಲ್ಲಿ ನಡೆಯುವ ಸೂರ್ಯ-ಚಂದ್ರ ಜೋಡುಕೆರೆ ಕಂಬಳ ಕೂಟದ ಆಮಂತ್ರಣ ಪತ್ರಿಕೆಯನ್ನು ಕಳವಾಡಿ ಈಶ್ವರ ಮಾರಿಕಾಂಬಾ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು.
ಕಳವಾಡಿ ಈಶ್ವರ ಮಾರಿಕಾಂಬಾ ದೇವಸ್ಥಾನದ ಮೊಕ್ತೇಸರ ವಸಂತ್ ಕುಮಾರ್ ಶೆಟ್ಟಿ ಅವರು, ಜೋಡುಕೆರೆ ಕಂಬಳ ಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ಬೈಂದೂರು ಸಾಂಪ್ರದಾಯಕ ಹಾಗೂ ಜೋಡುಕೆರೆ ಕಂಬಳ ಸಮಿತಿಯ ಅಧ್ಯಕ್ಷ ಮಂಜು ಪೂಜಾರಿ ಸಸಿಹಿತ್ಲು ಮಾತನಾಡಿ, ದಿ. ವೆಂಕಟ ಪೂಜಾರಿ ಅವರು ಕಂಬಳ ಕ್ಷೇತ್ರದಲ್ಲಿ ಬಹಳಷ್ಟು ಹೆಸರು ಮಾಡಿದವರು. ಅವರ ನೆನಪಿಗಾಗಿ ಪ್ರಪ್ರಥಮ ಬಾರಿಗೆ ಜೋಡುಕೆರೆ ಕಂಬಳ ಆಯೋಜಿಸಿದ್ದೇವೆ. ಕಂಬಳಕ್ಕಾಗಿ ಹೊಸತಾಗಿ ಕಂಬಳಗದ್ದೆ ಸಜ್ಜಾಗುತ್ತಿದೆ ಎಂದರು.
ರಾಜ್ಯ ಕಂಬಳ ಅಸೋಸಿಯೇಷನ್ ಕಾರ್ಯಕಾರಿ ಸಮಿತಿ ಸದಸ್ಯ ವಿಕ್ರಂ ಪೂಜಾರಿ ಸಸಿಹಿತ್ಲು ಮಾತನಾಡಿ, ಕಂಬಳದಲ್ಲಿ ಹಗ್ಗ ಅತಿ ಕಿರಿಯ, ಕಿರಿಯ, ಹಿರಿಯ ಹಾಗೂ ಕನೆ ಹಲಗೆ ವಿಭಾಗದಲ್ಲಿ ಸ್ಪರ್ಧೆಯಿದ್ದು, ವಿಜೇತರಿಗೆ ನಗದು ಬಹುಮಾನ ಮತ್ತು ಶಾಶ್ವತ ಫಲಕ ನೀಡಲಾಗುವುದು. ಇದರೊಂದಿಗೆ ಸಮಾರೋಪ ಸಮಾರಂಭದಲ್ಲಿ 2025-26ನೇ ಸಾಲಿನ ಸಾಂಪ್ರದಾಯಿಕ ಕಂಬಳದ ವಿಜೇತರಿಗೆ ‘ಜಿಲ್ಲಾ ಚಾಂಪಿಯನ್ ಪುರಸ್ಕಾರ’ ಪ್ರದಾನ ನೀಡಿ ಗೌರವಿಸಲಾಗುವುದು ಎಂದರು.
ವೆಂಕಟರಮಣ ಗಾಣಿಗ ನಾವುಂದ, ಉಪಾಧ್ಯಕ್ಷ ಪರಮೇಶ್ವರ ಭಟ್ ಬೋಳಂಬಳ್ಳಿ, ಹಿರಿಯರಾದ ನಾಗಣ್ಣ ಕಳವಾಡಿ, ಧ.ಗ್ರಾ. ಯೋಜನಾಧಿಕಾರಿ ಚಂದ್ರ ನಾಯ್ಕ್, ಬೈಂದೂರು ಸೇನೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯೆ ಇಂದಿರಾ ಕೊಠಾರಿ, ಉಷಾ ಶೆಟ್ಟಿ, ಕಂಬಳ ಸಮಿತಿ ಉಪಾಧ್ಯಕ್ಷ ಸುರೇಶ್ ಪೂಜಾರಿ ಮೊಳೆಬೈಲು, ವೆಂಕಟೇಶ್ ಪೂಜಾರಿ ಬಡಾಮನೆ, ಸಮಿತಿ ಕಾರ್ಯದರ್ಶಿ ಸುಧೀರ್ ದೇವಾಡಿಗ ಕಂಚಿಕಾನ್, ರೈತ ಮುಖಂಡ ಗಣಪ ಗಂಗನಾಡು, ಮಂಜುನಾಥ್ ಗಾಣಿಗ ನಾವುಂದ, ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತ ಭಾಸ್ಕರ್ ದೇವಾಡಿಗ, ಭರತ್ ಕೊಠಾರಿ, ವಿಶ್ವನಾಥ್ ದೇವಾಡಿಗ ನಾಯ್ಕನಕಟ್ಟೆ, ಅರವಿಂದ ಪೂಜಾರಿ ಗಜ್ನಾರ್ ಮನೆ ಕೊಡೇರಿ, ನಾಗೇಂದ್ರ ಪೂಜಾರಿ ಕೊಡೇರಿ, ಶಂಕರ ದೇವಾಡಿಗ ನಾಗೂರು, ಅಣ್ಣಪ್ಪಯ್ಯ ಆಚಾರ್ಯ ಕಳವಾಡಿ, ಉದಯ್ ಗೌಡ ಬೋಳಂಬಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.