ADVERTISEMENT

ಉತ್ತರ ಕನ್ನಡ | ದೇವಿಮನೆ ಘಟ್ಟದಲ್ಲಿ ಮತ್ತೆ ಭೂಕುಸಿತ: ಶಿರಸಿ-ಕುಮಟಾ ಸಂಪರ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 4:49 IST
Last Updated 15 ಜೂನ್ 2025, 4:49 IST
<div class="paragraphs"><p>ಭೂಕುಸಿತದ ದೃಶ್ಯ</p></div>

ಭೂಕುಸಿತದ ದೃಶ್ಯ

   

ಶಿರಸಿ: ಶಿರಸಿ ಕುಮಟಾ ಸಂಪರ್ಕ ರಸ್ತೆಯ ದೇವಿಮನೆ ಘಟ್ಟ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ಭೂಕುಸಿತ ಉಂಟಾಗಿ ವಾಹನ ಸಂಚಾರ ಕಡಿತವಾಗಿದೆ. ಕಳೆದೆರಡು ದಿನಗಳ ಅವಧಿಯಲ್ಲಿ ನಡೆದ ಎರಡನೇ ಭೂಕುಸಿತ ಪ್ರಕರಣ ಇದಾಗಿದೆ.

ಶನಿವಾರ ರಾತ್ರಿಯಿಂದ ಹೆಚ್ಚಿರುವ ಮಳೆಯ ಕಾರಣದಿಂದ ಭೂಕುಸಿತ ಸಂಭವಿಸಿರುವ ಸಾಧ್ಯತೆಯಿದೆ. ಪ್ರಸ್ತುತ ರಸ್ತೆ ನಿರ್ಮಾಣ ಕಂಪನಿಯಿಂದ ತೆರವು ಕಾರ್ಯ ಆರಂಭವಾಗಿದೆ' ಎಂಬುದು ತಾಲ್ಲೂಕು ಆಡಳಿತದ ಮಾಹಿತಿ.

ADVERTISEMENT

ಶಿರಸಿ ಹಾಗೂ ಕುಮಟಾ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ಗುಡ್ಡಗಳನ್ನು ಅವೈಜ್ಞಾನಿಕವಾಗಿ ಕತ್ತರಿಸಲಾಗಿದೆ. ಈ ಕಾರಣ ಕಳೆದ ಮಳೆಗಾಲದ ಸಂದರ್ಭದಲ್ಲಿಯೂ ಭೂಕುಸಿತ ಉಂಟಾಗಿತ್ತು. ಈ ಬಾರಿ ಮಳೆಗಾಲದ ಆರಂಭದಲ್ಲೇ ಎರಡು ಬಾರಿ ಘಟನೆ ಜರುಗಿದೆ. ಜೋರು ಮಳೆಯಾದರೆ ಇನ್ನಷ್ಟು ಕಡೆ ಅಪಾಯವಾಗುವ ಸಾಧ್ಯತೆಯಿದೆ. ಈ ರಸ್ತೆಯಲ್ಲಿ ಸಂಚರಿಸುವುದು ಎಂದರೆ ಭಯದಲ್ಲೇ ಸಾಗುವಂತಾಗಿದೆ' ಎಂಬುದು ಸ್ಥಳಿಕರಾದ ದೇವರಾಜ ಮರಾಠಿ ಮಾತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.