
ಸಾಂದರ್ಭಿಕ ಚಿತ್ರ
ಗೋಕರ್ಣ: ಇಲ್ಲಿಯ ಬೇಲೆಹಿತ್ತಲಿನ ಯುವತಿಯೊಬ್ಬರಿಗೆ ಪ್ರೀತಿಸು ಎಂದು ಪೀಡಿಸಿದ ಯುವಕನೊಬ್ಬ, ಯುವತಿ ನಿರಾಕರಿಸಿದಾಗ ಸಿಟ್ಟಿಗೆದ್ದು ಯುವತಿಯ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ತಾನೂ ಕೈ ಕುಯ್ದುಕೊಂಡು ಗಾಯ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ.
ಚಿತ್ರದುರ್ಗದ ನಿವಾಸಿ, ಹಾಲಿ ಡ್ರೈಫ್ರುಟ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮೋಹನ ಕುಮಾರ ಎಂ. (28) ಕೈ ಕುಯ್ದುಕೊಂಡ ಯುವಕ. ತಾನು ಕೆಲಸ ಮಾಡುತ್ತಿದ್ದ ಅಂಗಡಿಯಲ್ಲಿಯೇ ಕೆಲಸ ಮಾಡುತ್ತಿದ್ದ ಯುವತಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಯುವತಿ ಕೆಲಸಕ್ಕೆ ಹೋಗುವದನ್ನೇ ನಿಲ್ಲಿಸಿದ್ದರು. ಭಾನುವಾರ ಸಂಜೆ ಏಕಾಏಕಿ ಯುವತಿಯ ಮನೆಗೆ ಹೋದ ಮೋಹನ ಕುಮಾರ ಯುವತಿಗೆ ಮದುವೆಯಾಗುವಂತೆ ಒತ್ತಾಯಿಸಿದ. ಯುವತಿ ನಿರಾಕರಿಸಿದಾಗ ಸಿಟ್ಟಿನಿಂದ ಯುವತಿಯ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ತಾನೂ ತನ್ನ ಬಳಿಯಿದ್ದ ಚಾಕುವಿನಿಂದ ಕೈಕುಯ್ದುಕೊಂಡ.
ಈ ಕುರಿತು ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.