ADVERTISEMENT

ಹಳಿಯಾಳ: ಪೇಟೆ ಮಾರುತಿ ಮಂದಿರದಲ್ಲಿ ಹನುಮಾನ ಜಯಂತಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 12:41 IST
Last Updated 12 ಏಪ್ರಿಲ್ 2025, 12:41 IST
ಹಳಿಯಾಳ ಪೇಟೆ ಮಧ್ಯದಲ್ಲಿರುವ ಮಾರುತಿ ಮಂದಿರದಲ್ಲಿ ಹನುಮಾನ ಜಯಂತಿ ಆಚರಿಸಲಾಯಿತು
ಹಳಿಯಾಳ ಪೇಟೆ ಮಧ್ಯದಲ್ಲಿರುವ ಮಾರುತಿ ಮಂದಿರದಲ್ಲಿ ಹನುಮಾನ ಜಯಂತಿ ಆಚರಿಸಲಾಯಿತು   

ಹಳಿಯಾಳ: ಇಲ್ಲಿನ ಪೇಟೆ ಮಧ್ಯದಲ್ಲಿರುವ ಮಾರುತಿ ಮಂದಿರದಲ್ಲಿ ಪಟ್ಟಣದಲ್ಲಿ ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಸೂರ್ಯೋದಯದ ವೇಳೆ ಹನುಮನನ್ನು ತೊಟ್ಟಿಲಲ್ಲಿ ಹಾಕಿ ತೊಟ್ಟಿಲು ತೂಗಿದರು. ಸುಮಂಗಲೆಯರು ಆರತಿ ಬೆಳಗಿದ ನಂತರ ಮಾರುತಿ ಮಂದಿರದಲ್ಲಿ ವಿಶೇಷ ಪೂಜೆ ಮಾಡಲಾಯಿತು. ಅನೇಕ ಭಕ್ತರು ವಿವಿಧ ಖಾದ್ಯಗಳ ಪ್ರಸಾದವನ್ನು ನೆರೆದಿದ್ದ ಭಕ್ತರಿಗೆ ವಿತರಿಸಿದರು.

ದೇವಸ್ಥಾನದ ವತಿಯಿಂದ ಸಾರ್ವಜನಿಕರಿಗೆ ಬೆಳ್ಳಿಗ್ಗೆಯಿಂದಲೇ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಹನುಮಾನ ಜಯಂತಿ ಉತ್ಸವದ ಅಂಗವಾಗಿ ದೇವಸ್ಥಾನವನ್ನು ವಿದ್ಯುತ್‌ ದೀಪಾಲಂಕಾರ ಹಾಗೂ ತಳೀರು ತೋರಣಗಳಿಂದ ಸಿಂಗರಿಸಲಾಗಿತ್ತು.

ADVERTISEMENT

ಪಟ್ಟಣದ ಸಾರಿಗೆ ನಿಲ್ದಾಣದಲ್ಲಿರುವ ಹನುಮಾನ ಮಂದಿರ, ದುರ್ಗಾನಗರದ ಮಾರುತಿ ಮಂದಿರ, ಗುಡ್ನಾಪುರ ಆಶ್ರಯ ಕಾಲೋನಿಯ ಕೈಲಾಸ ರೋಡ ಮಾರುತಿ, ಧಾರವಾಡ ರಸ್ತೆಯ ಬಳಿ ಹನುಮಾನ ಮಂದಿರ ಮತ್ತಿತರೆಡೆ ಹನುಮಾನ ಜಯಂತಿ ಆಚರಣೆ ಮಾಡಲಾಯಿತು.

ತಾಲ್ಲೂಕಿನ ವಿವಿಧ ಗ್ರಾಮೀಣ ಭಾಗಗಳಾದ ಹವಗಿ, ತಿಮ್ಮಾಪುರ, ಭಾಗವತಿ, ಬೆಳವಟಗಿ, ಆಲೂರು, ಕಾವಲವಾಡ, ಬಿ.ಕೆ.ಹಳ್ಳಿ, ಅರ್ಲವಾಡ, ತೇರಗಾಂವ, ಮುರ್ಕವಾಡ, ಯಡೋಗಾ, ಮಂಗಳವಾಡ, ಸಾತನಳ್ಳಿ, ಜನಗಾ, ನಂದಿಗದ್ದಾ, ಮತ್ತಿತರ ಗ್ರಾಮ ಗಳಲ್ಲಿನ ಮಾರುತಿ ಮಂದಿರದಲ್ಲಿ ಹನುಮಾನ ಜಯಂತಿಯನ್ನು ಆಚರಿಸಲಾಯಿತು.

ಗ್ರಾಮೀಣ ಭಾಗದಲ್ಲಿಯ ಕೆಲವು ಮಂದಿರಗಳಲ್ಲಿ ಬೆಳ್ಳಿಗ್ಗೆಯಿಂದಲೇ ಹನುಮ ನಾಮ ಜಪ, ಉಪಾಸನೆ, ಕೀರ್ತನೆ, ಭಜನೆಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.