ADVERTISEMENT

ಬಿಜೆಪಿ ಶಾಸಕರ ಅಮಾನತು ಸರಿಯಾದ ಕ್ರಮ: ಗೃಹ ಸಚಿವ ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2025, 7:57 IST
Last Updated 26 ಮಾರ್ಚ್ 2025, 7:57 IST
<div class="paragraphs"><p>ಜಿ. ಪರಮೇಶ್ವರ</p></div>

ಜಿ. ಪರಮೇಶ್ವರ

   

ಗೋಕರ್ಣ (ಉತ್ತರ ಕನ್ನಡ): ವಿಧಾನಸಭೆಯಲ್ಲಿ ಏನು ನಡೆಯಬೇಕು, ಏನು ಮಾತಾಡಬೇಕು ಎಂದು ನಿರ್ಧರಿಸುವುದು ಸಭಾಧ್ಯಕ್ಷರ ಕೆಲಸ. ಸಭೆಯ ಘನತೆ, ಗೌರವ, ಮರ್ಯಾದೆ ಕಾಪಾಡುವುದು ಸಭೆಯ ಅಧ್ಯಕ್ಷರ ಕರ್ತವ್ಯ. ಅದನ್ನು ಅವರು ಸರಿಯಾಗಿ ನಿಭಾಯಿಸಿದ್ದಾರೆ ಎಂದು ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಅವರು ಬುಧವಾರ ಗೋಕರ್ಣದಲ್ಲಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿ, ನಂತರ ಪತ್ರಕರ್ತರ ಜತೆ ಮಾತನಾಡಿದ ಅವರು, ಶಾಸಕರನ್ನು ಅಮಾನತ್ತು ಮಾಡುವ ಅಧಿಕಾರ ಸಭಾಧ್ಯಕ್ಷರಿಗೆ ಇದೆ. ಶಾಸಕರೂ ಸದನದಲ್ಲಿ ಗೌರವದಿಂದ ನಡೆಯಬೇಕು. ಸದನದ ಘನತೆ ಕಾಪಾಡುವುದು ಶಾಸಕರ ಕರ್ತವ್ಯವೂ ಹೌದು. ಅವರು ಸದನದಲ್ಲಿ ಅಸಭ್ಯತೆಯಿಂದ ವರ್ತಿಸಿದಾಗ ಬೇರೆ ದಾರಿಯಿಲ್ಲದೇ ಸಭಾಧ್ಯಕ್ಷರು ಅಮಾನತ್ತು ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಅದು ಸರಿಯಾದ ಕ್ರಮ ಎಂದು ಸಭಾಧ್ಯಕ್ಷರನ್ನು ಸಮರ್ಥಿಸಿಕೊಂಡರು.

ADVERTISEMENT

ಮಧುಬಲೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಶಾಸಕ ರಾಜಣ್ಣ ನನ್ನನ್ನು ಭೇಟಿಯಾಗಿ ಎಲ್ಲ ವಿಚಾರ ಹೇಳಿದ್ದಾರೆ. ಅವರು ಪೊಲೀಸರಲ್ಲಿ ಈ ಬಗ್ಗೆ ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಕೇಣಿ, ಹೊನ್ನಾವರದ ಟೊಂಕದ ಬಂದರಿನ ಬಗ್ಗೆ ಪ್ರಶ್ನೆ ಪ್ರತಿಕ್ರಿಯಿಸದ ಅವರು, ಕರಾವಳಿ ಭಾಗದಲ್ಲಿ ಕಾನೂನು ವ್ಯವಸ್ಥೆ ಪರಿಶೀಲಿಸಲು ಬಂದಿದ್ದೇನೆ. ಗೃಹ ಇಲಾಖೆ ಸರಿಯಾಗಿ ಕೆಲಸ ನಿರ್ವಹಿಸುತ್ತಿದೆಯೋ ಇಲ್ಲವೋ, ಏನಾದರೂ ಕುಂದುಕೊರತೆ ಇದೆಯೋ ಎಂದು ತಿಳಿಯಲು ಬಂದಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಜಿಲ್ಲಾ ಕಾಂಗ್ರೆಸ್‌ ಘಟಜದ ಅಧ್ಯಕ್ಷ ಸಾಯಿನಾಥ್ ಗಾಂವಕರ್, ತಾಲ್ಲೂಕು ಘಡಕದ ಅಧ್ಯಕ್ಷ ಭುವನ್ ಭಾಗವತ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿವೇದಿತಾ ಆಳ್ವಾ, ಕಾಂಗ್ರೆಸ್ ಪ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.