
ಬಂಧನ (ಸಾಂದರ್ಭಿಕ ಚಿತ್ರ)
ಹೊಸಪೇಟೆ (ವಿಜಯನಗರ): ನಗರದ ರೈಲು ನಿಲ್ದಾಣದ ಸಮೀಪದ ಚಾಪಲಗಡ್ಡ ಪ್ರದೇಶದಲ್ಲಿ ಮಂಗಳವಾರ ನಸುಕಿನಲ್ಲಿ ವಿವಾಹಿತ ಮಹಿಳೆಯೊಬ್ಬರನ್ನು ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಆರೋಪಿ ಖಾಜಾ ಹುಸೇನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
‘ಮಹಿಳೆಗೆ ಖಾಜಾ ಹುಸೇನ್ ಈಚೆಗೆ ಪರಿಚಯವಾಗಿದ್ದ. ಅವರಿಬ್ಬರು ಅಕ್ರಮ ಸಂಬಂಧ ಹೊಂದಿದ್ದ ಆರೋಪ ಇದೆ. ಮಹಿಳೆ ಆತನಿಂದ ಹಣ ಪಡೆದುಕೊಂಡಿದ್ದಳು, ಆತ ತಾನು ಕೊಟ್ಟ ಹಣವನ್ನು ವಾಪಸ್ ಕೊಡುವಂತೆ ಕೇಳುತ್ತಿದ್ದ, ಹಣ ಕೇಳಿ ಮನೆಗೂ ಬರುತ್ತಿದ್ದ. ಬಹುತೇಕ ಅದೇ ವಿಷಯಕ್ಕೆ ಜಗಳವಾಗಿ ಆಕೆಯ ಕೊಲೆಯಲ್ಲಿ ಅಂತ್ಯವಾಗಿರುವ ಶಂಕೆ ಇದೆ. ವಿಚಾರಣೆ ನಡೆಯುತ್ತಿದೆ’ ಎಂದು ಎಸ್‌ಪಿ ಎಸ್.ಜಾಹ್ನವಿ ‘ಪ್ರಜಾವಾಣಿ’ಗೆ ತಿಳಿಸಿದರು.
ಇದು ಸಹ ಯಲ್ಲಾಪುರದಲ್ಲಿ ನಡೆದಂತಹ ಪ್ರಕರಣವೇ ಎಂದು ಕೇಳಿದಾಗ, ಇದೊಂದು ಪಕ್ಕಾ ಅನೈತಿಕ ಸಂಬಂಧದ ಪ್ರಕರಣದಂತಿದೆ, ಹಣದ ವಿಚಾರದಲ್ಲಿ ಇಬ್ಬರ ನಡುವೆ ಕಲಹ ಕೊಲೆಯಲ್ಲಿ ಅಂತ್ಯವಾಗಿರಬೇಕು, ತನಿಖೆ ನಡೆಯುತ್ತಿದೆ’ ಎಂದು ಎಸ್‌ಪಿ ಹೇಳಿದರು.
ಈ ಮಧ್ಯೆ ಕೊಲೆಯಾದ ಉಮಾ ಅವರ ತಾಯಿ ಗಾಯತ್ರಿ ಅವರು ನೀಡಿದ ದೂರಿನ ಮೇರೆಗೆ ಚಿತ್ತವಾಡ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಉಮಾ ಏಳು ವರ್ಷದ ಹಿಂದೆ ಆಂಧ್ರದಿಂದ ಗಂಡನನ್ನು ಬಿಟ್ಟು ತವರು ಮನೆಯಲ್ಲಿ ಇದ್ದಳು. ಕೂಲಿ ಕೆಲಸ ಮಾಡುತ್ತಿದ್ದಳು. ಐದು ತಿಂಗಳ ಹಿಂದೆ ಮಗಳಿಗೆ ಖಾಜಾ ಹುಸೇನ್ ಪರಿಚಯವಾಗಿತ್ತು. ಬಳಿಕ ಖಾಜಾ ಹುಸೇನ್ ಆಗಾಗ ಮನೆಗೆ ಬರುತ್ತಿದ್ದ. ಉಮಾ ಸಹ ಫೋನ್‌ನಲ್ಲಿ ಫೋನ್‌ನಲ್ಲಿ ಆತನೊಂದಿಗೆ ಮಾತನಾಡುತ್ತ ಇದ್ದಳು. ಸೋಮವಾರ ರಾತ್ರಿ 10 ಗಂಟೆಗೆ ಮನೆಗೆ ಬಂದ ಉಮಾ ಫೋನ್ ಮಾಡುತ್ತ ಹೊರಗಡೆ ಹೋದಳು, ಆದರೆ ಬಳಿಗ್ಗೆ ನೋಡಿದಾಗ ನಮ್ಮ ಮನೆಯ ಎದುರುಗಡೆ ಇರುವ ಮನೆಯ ಮಹಡಿಯ ಮೇಲೆ ಮಗಳ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಮೃತದೇಹ ಕಾಣಿಸಿತ್ತು’ ಎಂದು ದೂರಿನಲ್ಲಿ ತಿಳಿಸಲಾಗಿದೆ.
‘ಉಮಾ ನಾಲ್ಕು ತಿಂಗಳ ಹಿಂದೆ ಕೊಂಡನಯಕನಹಳ್ಳಿಯ ಸಾಯಿಬಾಬಾ ಗುಡಿಯಲ್ಲಿ ಖಾಜಾ ಹುಸೇನ್‌ನನ್ನು ಮದುವಯಾಗಿ ಹೇಳಿದ್ದಳು’ ಎಂದು ದೂರಿನಲ್ಲಿ ಗಾಯತ್ರಿ ತಿಳಿಸಿದ್ದಾರೆ.
ನಗರದ ರೈಲು ನಿಲ್ದಾಣದ ಸಮೀಪದ ಚಾಪಲಗಡ್ಡ ಪ್ರದೇಶದಲ್ಲಿ ಮಂಗಳವಾರ ನಸುಕಿನಲ್ಲಿ ನಡೆದಿದೆ.
ಉಮಾ ಅವರು ರೈಲ್ವೆ ಕ್ಯಾಟರಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
13 ವರ್ಷದ ಹಿಂದೆ ವಿವಾಹವಾಗಿದ್ದ ಉಮಾ ಅವರಿಗೆ ಮೂವರು ಗಂಡು ಮಕ್ಕಳಿದ್ದಾರೆ. ಐದಾರು ವರ್ಷಗಳ ಹಿಂದೆ ಇವರು ಆಂಧ್ರಪ್ರದೇಶ ಮೂಲದ ಗಂಡ ರಾಮಾಂಜನೇಯ ಅವರಿಂದ ದೂರವಾಗಿದ್ದರು. ಇಬ್ಬರು ಪುತ್ರರು ಉಮಾ ಬಳಿ, ಒಬ್ಬ ಪುತ್ರ ತಂದೆಯೊಂದಿಗೆ ಇದ್ದಾನೆ.
ಈಚೆಗೆ ಸ್ಥಳೀಯ ಯುವಕನೊಬ್ಬನೊಂದಿಗೆ ಈಕೆಗೆ ಅನೈತಿಕ ಸಂಬಂಧ ಬೆಳೆದಿತ್ತು. ಸಂಬಂಧ ಹೊಂದಿದ್ದ ಯುವಕನಿಂದಲೇ ಈಕೆ ಕೊಲೆಯಾಗಿರುವ ಶಂಕೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಎಸ್‌ಪಿ ಎಸ್.ಜಾಹ್ನವಿ, ಎಎಸ್‌ಪಿ ಜಿ.ಮಂಜುನಾಥ್, ಡಿವೈಎಸ್‌ಪಿ ಟಿ.ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಚಿತ್ತವಾಡ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವ ಪ್ರಕ್ರಿಯೆ ನಡೆದಿದೆ.
ಆರೋಪಿ ಖಾಜಾ ಹುಸೇನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.