ADVERTISEMENT

ಕೂಡ್ಲಿಗಿ | ನಾಯಿ, ಕೋತಿ ದಾಳಿ: ಜನರಿಗೆ ಭೀತಿ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 3:56 IST
Last Updated 23 ಆಗಸ್ಟ್ 2025, 3:56 IST
<div class="paragraphs"><p>ಕೂಡ್ಲಿಗಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜನಗಳ ಮಧ್ಯಯೇ ನಾಯಿಗಳ ಹಿಂಡು ಓಡಾಡುತ್ತಿರುವುದು</p></div>

ಕೂಡ್ಲಿಗಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜನಗಳ ಮಧ್ಯಯೇ ನಾಯಿಗಳ ಹಿಂಡು ಓಡಾಡುತ್ತಿರುವುದು

   

ಕೂಡ್ಲಿಗಿ: ಪಟ್ಟಣದ ಬೀದಿ, ಬೀದಿಗಳಲ್ಲಿ ಗುಂಪಾಗಿ ಓಡಾಡುವ ನಾಯಿಗಳಿಂದ ಸಾರ್ವಜನಿಕರು ತೂಂದರೆ ಅನುಭವಿಸುತ್ತಿದ್ದಾರೆ. ಮನೆ ಬಾಗಿಲಿಗೆ ಬರುವ ಕೋತಿಗಳಿಂದ ರಕ್ಷಿಸಿಕೊಳ್ಳಲು ಗೃಹಿಣಿಯರು ಪರದಾಡುವಂತಾಗಿದೆ.

ಪಟ್ಟಣದಲ್ಲಿ ಬೀದಿ ನಾಯಿಗಳು ಹೆಚ್ಚಾಗಿದ್ದು, ಒಂದೊಂದು ಕಡೆ 10ರಿಂದ 15 ನಾಯಿಗಳು ಗುಂಪು ಗುಂಪಾಗಿ ತಿರುಗಾಡುತ್ತಿದ್ದು, ರಸ್ತೆಯಲ್ಲಿ ಜನರು ಓಡಾಡುವುದು, ವಾಹನ ಸವಾರರು ಸಂಚಾರ ಮಾಡುವುದು, ಮಕ್ಕಳು, ವೃದ್ಧರು ನಿಶ್ಚಿಂತೆಯಿಂದ ಓಣಿಗಳಲ್ಲಿ ಸಂಚರಿಸುವುದೇ ಕಷ್ಟವಾಗಿದೆ. ಈ ಕುರಿತು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ADVERTISEMENT

ಪಟ್ಟಣದ ಪ್ರಮುಖ ವೃತ್ತ. ರಸ್ತೆಗಳಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಅಲ್ಲದೆ ಅತಿ ಕಿರಿದಾದ ಹಾಗೂ ಜನ ನಿಬಿಡ ರಸ್ತೆಗಳಲ್ಲಿ ಹಿಂಡು ಹಿಂಡು ನಾಯಿಗಳು ಏಕಾಏಕಿ ರಸ್ತೆಗಳಿಗೆ ನುಗ್ಗುತ್ತವೆ. ಇದರಿಂದ ವಾಹನ ಸವಾರರು, ಪಾದಚಾರಿಗಳು ಗಾಬರಿ ಬಿದ್ದು, ಅಡ್ಡಾದಿಡ್ಡಿ ವಾಹನ ಚಲಾಯಿಸುವ ಅನಿವಾರ್ಯತೆ ಎದುರಾಗುತ್ತಿದೆ. ಅದರಲ್ಲೂ ಪಟ್ಟಣದ ಅತ್ಯಂತ ಪ್ರಮುಖ ರಸ್ತೆಯಾದ ಕೊಟ್ಟೂರು ರಸ್ತೆಯಲ್ಲಂತೂ ಎಲ್ಲೆಂದರಲ್ಲಿ ನಾಯಿಗಳು ಮಲಗಿರುತ್ತವೆ. ಸಾರಿಗೆ ಬಸ್ಸುಗಳು ಸೇರಿದಂತೆ ದೊಡ್ಡ ವಾಹನಗಳು ಸಹ ಸಂಚಾರ ಮಾಡಲು ಸಾಧ್ಯವಾಗದ ಸ್ಥಿತಿ ಇದೆ.

ಪಟ್ಟಣದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಅವುಗಳ ಸಂಖ್ಯೆ ತೀವ್ರವಾಗಿ ಬೆಳೆಯುತ್ತಿದ್ದು, ಅವುಗಳ ನಿಯಂತ್ರಣಕ್ಕೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಪಟ್ಟಣದಲ್ಲಿನ ನಾಯಿಗಳು ಹಾಗೂ ಕೋತಿಗಳ ನಿಯಂತ್ರಣಕ್ಕೆ ತಕ್ಷಣ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.