ADVERTISEMENT

ವಿಜಯನಗರ: ಅಮಲಾಪುರ ಬಳಿ ಲಾರಿ ಹರಿದು ಕರಡಿ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜೂನ್ 2021, 16:32 IST
Last Updated 22 ಜೂನ್ 2021, 16:32 IST
ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಸತ್ತಿರುವ ಕರಡಿ
ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಸತ್ತಿರುವ ಕರಡಿ   

ಕೂಡ್ಲಿಗಿ: ಲಾರಿ ಹರಿದು ಕರಡಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಅಮಲಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ತಾಲ್ಲೂಕಿನ ಗುಡೇಕೋಟೆ ಗ್ರಾಮದ ಬಳಿ ಕರಡಿಧಾಮವಿದೆ. ಧಾಮದ ಅರಣ್ಯಕ್ಕೆ ಅಂಟಿಕೊಂಡಂತೆ ಅಮಲಾಪುರ ಬಳಿ ಕಾದಿಟ್ಟ ಅರಣ್ಯದ ಮೂಲಕ ಆಹಾರ ಅರಸಿ ಬಂದಿರುವ ಕರಡಿಯು ರಾಷ್ಟ್ರೀಯ ಹೆದ್ದಾರಿ ದಾಟುತ್ತಿರುವ ಸಂದರ್ಭದಲ್ಲಿ ಲಾರಿಯೊಂದು ಹರಿದಿದ್ದರಿಂದ ಸ್ಥಳದಲ್ಲೇ ಸತ್ತಿದೆ.

ಹೆದ್ದಾರಿಯಲ್ಲಿ ಲಾರಿ ಹರಿದು ಕರಡಿ ಸತ್ತು ಬಿದ್ದಿರುವ ಮಾಹಿತಿಯನ್ನು ಅಮಲಾಪುರದ ಕೆಲವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ವಲಯ ಅರಣ್ಯಧಿಕಾರಿ ಬಿ.ಎಸ್. ಮಂಜುನಾಥ ಭೇಟಿ ನೀಡಿ ಪರಿಶೀಲಿಸಿ, ಕರಡಿಯನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲು ವ್ಯವಸ್ಥೆ ಮಾಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.