ADVERTISEMENT

ಮುದ್ದೇಬಿಹಾಳ| ಡಿಎಸ್‌ಎಸ್‌ಗೆ ಜಾತಿಯ ಗಡಿ ಇಲ್ಲ: ವೈ.ಸಿ. ಮಯೂರ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 4:40 IST
Last Updated 14 ಜನವರಿ 2026, 4:40 IST
ಮುದ್ದೇಬಿಹಾಳದಲ್ಲಿ ಡಿ.ಎಸ್.ಎಸ್. (ಡಿ.ಜಿ.ಸಾಗರ ಬಣ) ತಾಲ್ಲೂಕು ಘಟಕ್ಕೆ ಆಯ್ಕೆಯಾದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು 
ಮುದ್ದೇಬಿಹಾಳದಲ್ಲಿ ಡಿ.ಎಸ್.ಎಸ್. (ಡಿ.ಜಿ.ಸಾಗರ ಬಣ) ತಾಲ್ಲೂಕು ಘಟಕ್ಕೆ ಆಯ್ಕೆಯಾದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು    

ಮುದ್ದೇಬಿಹಾಳ: ‘ಶೋಷಿತರ ನೆರವಿಗೆ ನಿಲ್ಲುವ ದಲಿತ ಸಂಘರ್ಷ ಸಮಿತಿಯು, ಪರಿಶಿಷ್ಟರಿಗೆ ಮಾತ್ರ ಮೀಸಲಾದ ಸಂಘಟನೆಯಲ್ಲ’ ಎಂದು ಡಿ.ಎಸ್.ಎಸ್. (ಡಿ.ಜಿ.ಸಾಗರ ಬಣ) ಜಿಲ್ಲಾ ಸಂಚಾಲಕ ವೈ.ಸಿ. ಮಯೂರ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಡಿ.ಎಸ್.ಎಸ್ .(ಡಿ.ಜಿ.ಸಾಗರ ಬಣ) ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದರು.

‘ದಲಿತರೆಂದರೆ ಜಾತಿ, ಧರ್ಮ, ಭಾಷೆಯ ಗಡಿ ಇಲ್ಲದವರು. ಡಿ.ಎಸ್.ಎಸ್.ಗೆ ಜಾತಿ, ಧರ್ಮ, ಭಾಷೆಯ ಗಡಿ ಇಲ್ಲ. ಆರ್ಥಿಕ, ಸಾಮಾಜಿಕವಾಗಿ ಶೋಷಣೆಗೆ ಒಳಗಾದವರೆಲ್ಲರೂ ದಲಿತರೇ. ಇಂಥವರ ಪರವಾಗಿ ದಲಿತ ಸಂಘರ್ಷ ಸಮಿತಿ ನಿಲ್ಲುತ್ತದೆ’ ಎಂದರು.

ADVERTISEMENT

ತಾಲ್ಲೂಕು ಘಟಕಕ್ಕೆ ನೂತನ ಸಂಚಾಲಕನ್ನಾಗಿ ಬಸವರಾಜ ತಂಗಡಗಿ, ಸಹ ಸಂಚಾಲಕರನ್ನಾಗಿ ಪರಶು ಇಂಗಳಗೇರಿ, ತಮ್ಮಣ್ಣ ನಂದಿ, ಪರಶುರಾಮ ಚಲವಾದಿ, ಖಜಾಂಚಿಯನ್ನಾಗಿ ರಾಮಣ್ಣ ಚಲವಾದಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಜಿಲ್ಲಾ ಸಮಿತಿಯ ಪ್ರಮುಖರಾದ ಮಹಾಂತೇಶ ಸಾಸಬಾಳ, ಅವಿನಾಶ ಬಾಣಿಕೋಲ, ಸಿದ್ದಾರ್ಥ ರೋಗಿ, ಯಮನೂರಿ ಬೆಕಿನಾಳ, ಕಾನೂನು ಸಲಹೆಗಾರ ಕೆ.ಬಿ. ದೊಡಮನಿ, ಸಿ.ಜಿ. ವಿಜಯಕರ, ಹರೀಶ ನಾಟೀಕಾರ, ದೇವರಾಜ ಹಂಗರಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.