
ಯಾದಗಿರಿ: ನಗರದ 27 ಕೇಂದ್ರಗಳಲ್ಲಿ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಭಾನುವಾರ ಸುಗಮವಾಗಿ ಜರುಗಿತು.
ಪತ್ರಿಕೆ-1ಕ್ಕೆ 2,684 ಮತ್ತು ಪತ್ರಿಕೆ-2ಕ್ಕೆ 7,828 ಅಭ್ಯರ್ಥಿಗಳು ನೋಂದಾಯಿಸಿದ್ದರು.
ಮೊದಲ ಅವಧಿ ಬೆಳಿಗ್ಗೆ 10ರಿಂದ ಹಾಗೂ ಮಧ್ಯಾಹ್ನ 2ರಿಂದ ಎರಡನೇ ಅವಧಿಯ ಪರೀಕ್ಷೆಗಳು ಜರುಗಿದವು.
ಮೊದಲ ಅವಧಿಗೆ 2,534 ಅಭ್ಯರ್ಥಿಗಳು ಹಾಜರಾಗಿ, 150 ಮಂದಿ ಗೈರಾಗಿದ್ದರು. ಎರಡನೇ ಅವಧಿಗೆ 7,398 ಜನ ಹಾಜರಿದ್ದು, 430 ಅಭ್ಯರ್ಥಿಗಳು ಗೈರಾಗಿದ್ದರು.
ಪರೀಕ್ಷಾ ಕೇಂದ್ರಕ್ಕೆ ಬಂದ ಅಭ್ಯರ್ಥಿಗಳು ಅಧಿಕಾರಿಗಳು ಪ್ರವೇಶ ಪತ್ರ ಪರಿಶೀಲಿಸಿದ ನಂತರ ಲೋಹಶೋಧಕದ ಮೂಲಕ ಒಳ ಪ್ರವೇಶಿಸಿದರು.
ಮಹಿಳಾ ಅಭ್ಯರ್ಥಿಗಳ ಮೂಗುತಿ, ಮೂಗುಬಟ್ಟು, ಮೂಗುನತ್ತು, ಕಿವಿ ಓಲೆಗಳನ್ನು ತೆಗೆಯಿಸಲಾಯಿತು.
ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳ ಪೋಷಕರೂ ಜತೆಗೆ ಬಂದಿದ್ದು, ಅಭ್ಯರ್ಥಿಗಳ ಮಕ್ಕಳನ್ನು ಪರೀಕ್ಷಾ ಕೇಂದ್ರದ ಹೊರಗೆ ಮಾಡುತ್ತಾ ಕೂತಿದ್ದು ಕಂಡುಬಂದಿತು.
ಪರೀಕ್ಷೆಯ ಹಿನ್ನಲೆ ಕೇಂದ್ರಗಳ ಸುತ್ತಲಲ್ಲಿ, ಪರೀಕ್ಷಾ ವೇಳೆ ನಿಷೇಧಿತ ಪ್ರದೇಶವೆಂದು ಘೋಷಿಸಿದ್ದ ಹಿನ್ನಲೆ ಅಂಗಡಿಗಳನ್ನು ಮುಚ್ಚಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.