ಪ್ರಾತಿನಿಧಿಕ ಚಿತ್ರ
1. ಈ ಹೇಳಿಕೆಗಳನ್ನು ಪರಿಗಣಿಸಿ.
ಎ. ಇ–ಕಚೇರಿ ಭಾರತ ಸರ್ಕಾರದ ರಾಷ್ಟ್ರೀಯ ಇ–ಆಡಳಿತ ಕಾರ್ಯಕ್ರಮದ ಮಿಷನ್ ಮೋಡ್ ಯೋಜನೆಯಾಗಿದೆ
ಬಿ. ಇ–ಕಚೇರಿ ತಂತ್ರಾಂಶವನ್ನು ನ್ಯಾಷನಲ್ ಇನ್ಫಾರ್ಮಯಾಕ್ಸ್ ಸೆಂಟರ್ ಅಭಿವೃದ್ಧಿಪಡಿಸಿದೆ
ಸರಿಯಾದ ಉತ್ತರ ಆರಿಸಿ
ಎ. ಹೇಳಿಕೆ ಎ ಸರಿ
ಬಿ. ಹೇಳಿಕೆ ಬಿ ಸರಿ
ಸಿ. ಎರಡೂ ತಪ್ಪು
ಡಿ. ಎರಡೂ ಸರಿ
ಉತ್ತರ: ಡಿ
2. ಈ ಹೇಳಿಕೆಗಳನ್ನು ಪರಿಗಣಿಸಿ.
ಎ. ಇ–ಕನ್ನಡ ಯೋಜನೆಯು ರಾಜ್ಯ ಸಕಾ೯ರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದೆ.
ಬಿ. ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಎಲ್ಲ ಕ್ಷೇತ್ರಗಳಲ್ಲಿ ಕನ್ನಡ ಭಾಷೆಯನ್ನು ಪರಿಣಾಮಕಾರಿ ಅಳವಡಿಕೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.
ಸರಿಯಾದ ಉತ್ತರ ಆರಿಸಿ
ಎ. ಹೇಳಿಕೆ ಎ ಸರಿ
ಬಿ. ಹೇಳಿಕೆ ಬಿ ಸರಿ
ಸಿ. ಎರಡೂ ತಪ್ಪು
ಡಿ. ಎರಡೂ ಸರಿ
ಉತ್ತರ: ಡಿ
3. ಈ ಹೇಳಿಕೆಗಳನ್ನು ಪರಿಗಣಿಸಿ.
1. ಪಾಕ್ ಆಕ್ರಮಿತ ಪ್ರದೇಶವನ್ನು ತನ್ನ ಭೂಪ್ರದೇಶವೆಂದು ಪಾಕಿಸ್ತಾನ ತನ್ನ ಔಪಚಾರಿಕ ನಕ್ಷೆಯಲ್ಲಿ ತೋರಿಸಿದೆ
2. ಪಾಕ್ ಆಕ್ರಮಿತ ಪ್ರದೇಶವನ್ನು ಪಾಕಿಸ್ತಾನ ತನ್ನ ಔಪಚಾರಿಕ ಪ್ರದೇಶವೆಂದು ತೋರಿಸದೇ ಸ್ವಾಯುತ್ತತೆ ಹೊಂದಿರುವ ಪ್ರದೇಶಗಳಾಗಿ ತೋರಿಸಿದೆ.
ಸರಿ ಉತ್ತರ ಗುರುತಿಸಿ
ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. ಎರಡೂ ತಪ್ಪು
ಉತ್ತರ: ಬಿ
4. ಭಾರತದಿಂದ ಪಾಕಿಸ್ತಾನಕ್ಕೆ ಯಾವ ಉತ್ಪನ್ನಗಳು 2019ಕ್ಕೂ ಮುನ್ನ ಹೆಚ್ಚಾಗಿ ರಫ್ತಾಗುತ್ತಿತ್ತು?
1. ಪೆಟ್ರೋಲಿಯಂ ಉತ್ಪನ್ನಗಳು
2. ಮೆಕ್ಯಾನಿಕಲ್ ಬಿಡಿಭಾಗಗಳು
3. ಪ್ಲಾಸ್ಟಿಕ್ ಉತ್ಪನ್ನಗಳು
4. ರಾಸಾಯನಿಕಗಳು
ಸರಿ ಉತ್ತರ ಗುರುತಿಸಿ
ಎ. 2, 3 ಮತ್ತು 4
ಬಿ. 1 ಮತ್ತು 2
ಸಿ. 2 ಮತ್ತು 4
ಡಿ. 4 ಮಾತ್ರ
ಉತ್ತರ: ಎ
5. ಆಫ್ರಿಕಾದಲ್ಲಿ ಜೈವಿಕ ವೈವಿಧ್ಯ ಇರುವ ಪ್ರದೇಶಗಳನ್ನು ಸಂರಕ್ಷಿಸಲು ಐರೋಪ್ಯ ಆಯೋ ಯಾವ ಕಾರ್ಯಕ್ರಮವನ್ನು ಜಾರಿಗೆ ತರುತ್ತಿದೆ?
ಎ. ನೇಚರ್ ಆಫ್ರಿಕಾ ಕಾರ್ಯಕ್ರಮ
ಬಿ. ಆಫ್ರಿಕಾ ಎನ್ವಿರಾನ್ಮೆಂಟ್ ಪ್ರೊಟೆಕ್ಷನ್ ಪ್ರೋಗ್ರಾಮ್
ಸಿ. ಆಫ್ರಿಕಾ–ಏಷ್ಯಾ ಪ್ರೊಟೆಕ್ಷನ್ ಆಫ್ ಎನ್ವಿರಾನ್ಮೆಂಟ್ ಪ್ರೋಗ್ರಾಮ್
ಡಿ. ಆಫ್ರಿಕಾ ಜೈವಿಕ ವೈವಿಧ್ಯ ಸಂರಕ್ಷಣಾ ಕಾರ್ಯಕ್ರಮ
ಉತ್ತರ: ಎ
6. ಕೆಳಗಿನ ಯಾವ ಕಾಯ್ದೆಯನ್ವಯ ರಾಷ್ಟ್ರೀಯ ಮಹಿಳಾ ಆಯೋಗವನ್ನು ಸ್ಥಾಪಿಸಲಾಯಿತು?
ಎ. ರಾಷ್ಟ್ರೀಯ ಮಹಿಳಾ ಆಯೋಗ ಕಾಯ್ದೆ–1988
ಬಿ. ರಾಷ್ಟ್ರೀಯ ಮಹಿಳಾ ಆಯೋಗ ಕಾಯ್ದೆ–1990
ಸಿ. ಸಿಎಂ ಮಹಿಳಾ ಆಯೋಗ ಕಾಯ್ದೆ–1991
ಡಿ. ರಾಷ್ಟ್ರೀಯ ಮಹಿಳಾ ಹಕ್ಕುಗಳ ಕಾಯ್ದೆ–1990
ಉತ್ತರ: ಬಿ
7. ಯಾವುವು ಮಹಿಳಾ ಹಕ್ಕುಗಳನ್ನು ಸಂರಕ್ಷಿಸುವ ಕಾನೂನಾತ್ಮಕ ಕಾಯ್ದೆಗಳಾಗಿವೆ?
1. ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ನಿಷೇಧ ಕಾಯ್ದೆ–2013
2. ಗಣಿಗಾರಿಕೆ ಕಾಯ್ದೆ–1952
3. ಕಾರ್ಖಾನೆ ಕಾಯ್ದೆ–1948
4. ಕನಿಷ್ಠ ವೇತನ ಕಾಯ್ದೆ–1948
ಸರಿ ಉತ್ತರ ಗುರುತಿಸಿ
ಎ. 1 ಮಾತ್ರ
ಬಿ. 1, 2 ಮತ್ತು 4
ಸಿ. 1, 2, 3 ಮತ್ತು 4
ಡಿ. 3 ಮತ್ತು 4
ಉತ್ತರ: ಸಿ
8. ಯಾವ ಯುದ್ಧದಲ್ಲಿ ಸರ್ಬಿಯಾ ಕೊಸೋವೋ ಮೇಲಿನ ನಿಯಂತ್ರಣವನ್ನು ಕಳೆದುಕೊಂಡಿತ್ತು?
ಎ. ಕೊಸೋವೋ ಯುದ್ಧ – 1389
ಬಿ. ಕೊಸೋವೋ ಯುದ್ಧ – 1789
ಸಿ. ಸರ್ಬಿಯಾ ಯುದ್ಧ – 1254
ಡಿ. ಎರಡನೇ ಮಹಾಯುದ್ಧ – 1939
ಉತ್ತರ: ಎ
9. ಕೊಸೋವೋ ಪ್ರದೇಶದ ಜನಸಂಖ್ಯೆಯ ಸ್ವರೂಪಕ್ಕೆ ಸಂಬಂಧಿಸಿ ಸರಿ ಹೇಳಿಕೆ ಗುರುತಿಸಿ.
1. ಈ ಪ್ರದೇಶದಲ್ಲಿ ಅಲ್ಬೇನಿಯ ಮೂಲದ ಮುಸಲ್ಮಾನರು ಹೆಚ್ಚಾಗಿ ವಾಸಿಸುತ್ತಿದ್ದಾರೆ
2. ಈ ಪ್ರದೇಶದಲ್ಲಿ ಕಜಕಸ್ತಾನ ಮೂಲದ ಮುಸಲ್ಮಾನರು ಹೆಚ್ಚಾಗಿ ವಾಸಿಸುತ್ತಿದ್ದಾರೆ
3. ಈ ಪ್ರದೇಶದಲ್ಲಿ ಅಲ್ಬೇನಿಯ ಮತ್ತು ಕಜಕಸ್ತಾನ ಮೂಲದ ಮುಸಲ್ಮಾನರು ಹೆಚ್ಚಾಗಿ ವಾಸಿಸುತ್ತಿದ್ದಾರೆ
ಸರಿ ಉತ್ತರ ಗುರುತಿಸಿ
ಎ. 1, 2 ಮತ್ತು 3
ಬಿ. 1 ಮಾತ್ರ
ಸಿ. 2 ಮಾತ್ರ
ಡಿ. 3 ಮಾತ್ರ
ಉತ್ತರ: ಬಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.