ADVERTISEMENT

Space Careers: ‘ಸ್ಪೇಸ್’ನಲ್ಲಿ ಇನ್ನಷ್ಟು ಕೋರ್ಸ್, ಉದ್ಯೋಗ

ಗುರುರಾಜ್ ಎಸ್.ದಾವಣಗೆರೆ
Published 4 ಸೆಪ್ಟೆಂಬರ್ 2023, 0:30 IST
Last Updated 4 ಸೆಪ್ಟೆಂಬರ್ 2023, 0:30 IST
<div class="paragraphs"><p>ಆದಿತ್ಯ ಎಲ್-1</p></div>

ಆದಿತ್ಯ ಎಲ್-1

   

(ಪಿಟಿಐ ಚಿತ್ರ)

ಕಳೆದ ಸಂಚಿಕೆಯಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿರುವ ವಿವಿಧ ಕೋರ್ಸ್‌ಗಳ ಕುರಿತು ಮಾಹಿತಿ ನೀಡಲಾಗಿತ್ತು. ಈ ಸಂಚಿಕೆಯಲ್ಲಿ ಸರ್ಟಿಫಿಕೇಟ್ ಕೋರ್ಸ್‌ಗಳು ಹಾಗೂ ಇನ್ನಷ್ಟು ಉದ್ಯೋಗಾವಕಾಶಗಳ ಬಗ್ಗೆ ವಿವರಿಸಲಾಗಿದೆ.

ADVERTISEMENT

ಬಾಹ್ಯಾಕಾಶ ಕ್ಷೇತ್ರ | ವಿವಿಧ ಕೋರ್ಸ್ - ವಿಪುಲ ಉದ್ಯೋಗ

ಭಾರತ ಹಾಗೂ ವಿಶ್ವದ ಬಾಹ್ಯಾಕಾಶ (ಸ್ಪೇಸ್‌) ಯೋಜನೆಗಳು ಒಂದೊಂದೇ ಯಶಸ್ವಿ ಯಾಗುತ್ತಿದ್ದಂತೆ ವಿದ್ಯಾರ್ಥಿ ಸಮೂಹದಲ್ಲಿ ಬಾಹ್ಯಾಕಾಶ ವಿಜ್ಞಾನ – ತಂತ್ರಜ್ಞಾನ - ಸಂಶೋಧನೆಯ ಕಡೆ ಭಾರಿ ಒಲವು ವ್ಯಕ್ತವಾಗುತ್ತಿದೆ. ಕಾಲೇಜು, ವಿಶ್ವವಿದ್ಯಾಲಯಗಳು ಡಿಪ್ಲೊಮಾ, ಪದವಿ, ಪಿಎಚ್‌.ಡಿಯವರೆಗೂ ಶಿಕ್ಷಣ ನೀಡುತ್ತಿವೆ. ಸರ್ಟಿಫಿಕೇಟ್ ಕೋರ್ಸ್‌ಗಳೂ ಇವೆ. ಹಳೆಯ ಕೋರ್ಸ್‌ಗಳ ಜೊತೆಗೆ ಹೊಸ ಕಾಲದ ಅಗತ್ಯಕ್ಕೆ ತಕ್ಕಂತೆ ನವನವೀನ ಕೋರ್ಸ್‌ಗಳನ್ನು ಪ್ರಾರಂಭಿಸುತ್ತಿವೆ.

ಕಳೆದ ಸಂಚಿಕೆಯಲ್ಲಿ ಕೆಲವು ಡಿಪ್ಲೊಮಾ ಕೋರ್ಸ್‌ಗಳ ಬಗ್ಗೆ ವಿವರಣೆ ನೀಡಲಾಗಿತ್ತು. ಈ ಸಂಚಿಕೆಯಲ್ಲಿ ಪದವಿ ಕೋರ್ಸ್‌ಗಳ ಜೊತೆಗೆ, ಸರ್ಟಿಫಿಕೇಟ್ ಕೋರ್ಸ್‌ಗಳು ಹಾಗೂ ಇನ್ನಷ್ಟು ಉದ್ಯೋಗಾವಕಾಶ ಸಾಧ್ಯತೆಗಳ ಬಗ್ಗೆ ಗಮನಹರಿಸೋಣ. 

ಕೋಷ್ಠಕಗಳಲ್ಲಿ ಉಲ್ಲೇಖಿಸಿರುವ ಸಂಸ್ಥೆಗಳು ಮತ್ತು ಕೋರ್ಸ್‌ಗಳನ್ನು ಕಲಿತ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲು ಸರ್ಕಾರಿ, ಖಾಸಗಿ ಮತ್ತು ನವೋದ್ಯಮಗಳು ಭಾರಿ ಬಂಡವಾಳ ಹೂಡುತ್ತಿವೆ. ದೇಶದ ಹಾಗೂ ವಿದೇಶಗಳ ಬಾಹ್ಯಾಕಾಶ ಯೋಜನೆಗಳಿಗೆ ಸಾಥ್ ನೀಡಲು ಬೃಹತ್ ಉದ್ಯಮವೇ ಸಿದ್ಧಗೊಳ್ಳುತ್ತಿದೆ. ಇಸ್ರೊ ತನ್ನ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಬೇಕಾದ ಸಲಕರಣೆ ಮತ್ತು ಸಾಧನಗಳನ್ನು ಸುಮಾರು 500 ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಘಟಕಗಳಿಂದಲೇ ಪಡೆದುಕೊಳ್ಳುತ್ತದೆ.

ಯಾರಿಗೆ ಕೆಲಸ?

ಡಿಪ್ಲೊಮಾ, ಪದವಿ ಮತ್ತು ಎಂಜಿನಿಯರಿಂಗ್‌ನಲ್ಲಿ ಅಡಿಟಿವ್ ಮ್ಯಾನುಫ್ಯಾಕ್ಚರಿಂಗ್, ಏರೋಸ್ಪೇಸ್, ಆರ್ಟಿಫಿಶಿಯಲ್ ಇಂಟಿಲಿಜೆನ್ಸ್, ಬಿಗ್‌ಡೇಟಾ, ಸೈಬರ್ ಸೆಕ್ಯುರಿಟಿ, ಡ್ರೋನ್, ಹೈಪರ್ ಸಾನಿಕ್ಸ್, ಇನ್‌ಫರ್ಮೇಶನ್ ಆ್ಯಂಡ್ ಕಮ್ಯುನಿಕೇಶನ್ಸ್ ಟೆಕ್ನಾಲಜಿ, ಮೆಶೀನ್ ಲರ್ನಿಂಗ್, ಆಪ್ಟಿಕ್ಸ್, ಕ್ವಾಂಟಂ ಕಂಪ್ಯೂಟಿಂಗ್, ರೊಬಾಟಿಕ್ಸ್, ಸ್ಪೇಸ್‌ಲಾ, ಸ್ಪೇಸ್ ಮೆಡಿಸಿನ್, ವರ್ಚುವಲ್ ರಿಯಾಲಿಟಿ ವಿಷಯಗಳನ್ನು ಚೆನ್ನಾಗಿ ಕಲಿತವರಿಗೆ ವಿಪುಲ ಉದ್ಯೋಗಾವಕಾಶಗಳಿವೆ.

ಉದ್ಯೋಗ ನೀಡುವವರಾರು ?

ನಮ್ಮ ಸಾರ್ವಜನಿಕ ಸಂಸ್ಥೆಗಳಾದ ಇಸ್ರೊ, ಎಚ್‌ಎಎಲ್, ಡಿಆರ್‌ಡಿಓ, ಭಾರತ್ ಎಲೆಕ್ಟ್ರಾನಿಕ್ಸ್, ಭಾರತೀಯ ನೌಕಾದಳ, ಎನ್‌ಎಎಲ್, ನ್ಯೂಸ್ಪೇಸ್ ಇಂಡಿಯ ಲಿಮಿಟೆಡ್, ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ಓಶಿಯನ್ ಟೆಕ್ನಾಲಜಿ, ಆ್ಯಂಟ್ರಿಕ್ಸ್ ಕಾರ್ಪೊರೇಷನ್ (ಅಂತರಿಕ್ಷ್) ಆಕರ್ಷಕ ಸಂಬಳದ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತವೆ.

ಬಾಹ್ಯಾಕಾಶ ವಿಜ್ಞಾನ – ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರು ಮಾಡಿರುವ ಅನೇಕ ನವೋದ್ಯಮಗಳು ಸಾವಿರಾರು ಪದವೀಧರರಿಗೆ ಈಗಾಗಲೇ ಉದ್ಯೋಗ ಕಲ್ಪಿಸಿವೆ. ಸಂತಸದ ವಿಚಾರವೆಂದರೆ ಶೇ 90 ರಷ್ಟು ನವೋದ್ಯಮಗಳು ಬೆಂಗಳೂರಿನಲ್ಲೇ ಇವೆ.

ಅಮೆರಿಕದ ನಾಸಾ ಸಂಸ್ಥೆ ಹೆಚ್ಚಾಗಿ ಅಮೆರಿಕದ ಪೌರತ್ವ ಇರುವವರನ್ನೇ ಕೆಲಸಕ್ಕೆ ಆಯ್ಕೆ ಮಾಡಿಕೊಳ್ಳುತ್ತಾರೆ. ಅನಿವಾರ್ಯವಾದಾಗ ಮಾತ್ರ ವಿದೇಶಿಯರಿಗೆ ಕೆಲಸ ನೀಡುತ್ತಾರೆ. ಯುರೋಪಿಯನ್ ಸ್ಪೇಸ್ ಏಜೆನ್ಸಿ, ಜಪಾನ್‌ಗಳಲ್ಲಿ ವಿಶ್ವದ ಎಲ್ಲ ಭಾಗದವರಿಗೂ ಕೆಲಸ ಮಾಡುವ ಅವಕಾಶವಿದೆ.

ಬಾಹ್ಯಾಕಾಶ ಕ್ಷೇತ್ರದ ಉದ್ಯೋಗ ನೀಡುವ ವಿದೇಶಿ ಖಾಸಗಿ ಕಂಪನಿಗಳಲ್ಲಿ ಪ್ರಮುಖವಾಗಿರುವವು ಹೀಗಿವೆ;      ಬೋಯಿಂಗ್, ಸ್ಪೇಸ್ ಎಕ್ಸ್, ಬ್ಲೂ ಓರಿಜಿನ್,  ಸಿಯರ‍್ರ ಸ್ಪೇಸ್ ಕಾರ್ಪೊರೋಷನ್;ವರ್ಜಿನ್ ಗೆಲಾಕ್ಟಿಕ್, ಆರ್ಬಿಟಲ್ ಸೈನ್ಸ್ ಕಾರ್ಪೊರೇಶನ್‌, ಜನರಲ್ ಡೈನಮಿಕ್ಸ್ ಕಾರ್ಪೊರೇಶನ್,ಅಸ್ತ್ರಸ್ಪೇಸ್,ಲಾಕ್ ಹೀಡ್ ಮಾರ್ಟಿನ್ ಕಾರ್ಪೊರೇಶನ್, ದ ಅಲ್ಟ್ರಾವೆಲ್ಥಿ.

ಯಾವ್ಯಾವ ಹುದ್ದೆಗಳು:

ಉದ್ಯೋಗಕ್ಕಾಗಿ ಬಾಹ್ಯಾಕಾಶ ಕ್ಷೇತ್ರ ಪ್ರವೇಶಿ ಸಲು ಆಸಕ್ತಿಯಿರುವ ತಂತ್ರಜ್ಞರಿಗೆ ದೊರೆಯಲಿರುವ ಪ್ರಮುಖ ಹುದ್ದೆಗಳು ಹೀಗಿವೆ; ಸ್ಯಾಟಲೈಟ್ ಎಂಜಿನಿಯರ್, ಸ್ಯಾಟಲೈಟ್ ಪ್ರೊಡಕ್ಷನ್ ಲೀಡ್,ಪ್ರೊಪಲ್ಶನ್ ಎಂಜಿನಿಯರ್,ಲಾಂಚ್ ಎಂಜಿನಿಯರ್,ಟೆಸ್ಟ್ ಎಂಜಿನಿಯರ್,ಮಿಶನ್ಸ್, ಮ್ಯಾನೇಜರ್,ಕ್ಲಾಲಿಟಿ ಇನ್ಸ್‌ಪೆಕ್ಟರ್, ಬಿಲ್ಡ್ ಸೂಪರ್ ವೈಸರ್,ಸ್ಟಾರ್‌ಲಿಂಕ್ ಮ್ಯಾನೇಜರ್,ಕ್ವಾಲಿಟಿ ಇನ್‌ಸ್ಪೆಕ್ಟರ್‌

ಭಾರತದಲ್ಲಿರುವ ಪ್ರಮುಖ ಖಾಸಗಿ ಬಾಹ್ಯಾಕಾಶ ತಂತ್ರಜ್ಞಾನ ಕಂಪನಿಗಳು

1. ಧೃವ ಸ್ಪೇಸ್,

2. ಏರೋಗುರು ಪ್ರೈವೇಟ್ ಲಿಮಿಟೆಡ್,

3.ಸ್ಕೈರೂಟ್ ಏರೋಸ್ಪೇಸ್

4. ಅಗ್ನಿಕುಲ್ ಕಾಸ್ಮೋಸ್,

5.ಬೆಲ್ಲಾಟ್ರಿಕ್ಸ್ ಏರೋಸ್ಪೇಸ್,

6.ಪಿಕ್ಸೆಲ್ಸ್,

7.ಕಾವಾ ಸ್ಪೇಸ್

8.ಟೀಂ ಇಂಡಸ್,

9.ಆಸ್ಟ್ರೊಗೇಟ್ ಲ್ಯಾಬ್

11.ದಿಗಂತರ,

12.ನ್ಯೂಪ್ಪೇಸ್ ರಿಸರ್ಚ್ ಅಂಡ್ ಟೆಕ್ನಾಲಜೀಸ್,

13.ವಸುಂಧರಾ ಜಿಯೋ ಟೆಕ್ನಾಲಜೀಸ್

14.ಸ್ಯಾಟ್‌ಶೂರ್,

15.ಆದ್ಯ ಏರೋಸ್ಪೇಸ್

16.ಮನಸ್ತು ಸ್ಪೇಸ್,  

17.ಆರ್ಬಿಟ್ ಏಯ್ಡ್ ಏರೋಸ್ಪೇಸ್ ಪ್ರೈವೇಟ್‌ ಲಿಮಿಟೆಡ್

(ಲೇಖಕರು: ಪ್ರಾಚಾರ್ಯರು, ವಿಡಿಯಾ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು, ಬೆಂಗಳೂರು) 

→ ಮುಗಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.