ADVERTISEMENT

ಪದವಿ ಪಾಸಾದವರಿಗೆ ಪ್ಯಾರಾಮಿಲಿಟರಿ ಪಡೆಗಳಲ್ಲಿ 349 ಅಸಿಸ್ಟಂಟ್ ಕಮಾಂಡೆಂಟ್ ಹುದ್ದೆ

ಯಾವುದೇ ಪದವಿ ಪಾಸಾದವರಿಗೆ ಪ್ಯಾರಾ ಮಿಲಿಟರಿ ಪಡೆಗಳಲ್ಲಿ 349 ಅಸಿಸ್ಟಂಟ್ ಕಮಾಂಡೆಂಟ್ ಹುದ್ದೆಗಳು

Manjunath C Bhadrashetti
Published 25 ಫೆಬ್ರುವರಿ 2026, 1:01 IST
Last Updated 25 ಫೆಬ್ರುವರಿ 2026, 1:01 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ದೇಶದ ಪ್ಯಾರಾ ಮಿಲಿಟರಿ ಪಡೆಗಳ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡಬೇಕು ಎಂದು ಕನಸು ಕಟ್ಟಿಕೊಂಡಿರುವ ಯುವಕ–ಯುವತಿಯರಿಗೆ ಮತ್ತೊಂದು ಅವಕಾಶ ಒದಗಿ ಬಂದಿದೆ.

ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಕೇಂದ್ರ ಗೃಹ ಇಲಾಖೆಯ ಅಂಗ ಸಂಸ್ಥೆಯಾದ ಕೇಂದ್ರಿಯ ಸಶಸ್ತ್ರ ಪೊಲೀಸ್ ಪಡೆಯ (ಸಿಎಪಿಎಫ್‌) ವಿವಿಧ ಘಟಕಗಳಲ್ಲಿ ಖಾಲಿ ಇರುವ 349 ‘ಅಸಿಸ್ಟಂಟ್ ಕಮಾಂಡೆಂಟ್’– ‘ಗ್ರೂಪ್ –ಎ’ ಹುದ್ದೆಗಳ ಭರ್ತಿಗೆ ನೇಮಕಾತಿ ಪರೀಕ್ಷೆ ನಡೆಸುತ್ತಿದೆ.

ADVERTISEMENT

ಆನ್‌ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇದೇ ಫೆಬ್ರುವರಿ 20 ರಿಂದ ಆರಂಭವಾಗಿದ್ದು, ಮಾರ್ಚ್ 12 ಅರ್ಜಿ ಸಲ್ಲಿಸಲು ಕಡೆಯ ದಿನ.

ದೇಶದ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯಗಳಿಂದ ಯಾವುದೇ ಪದವಿ ಪಾಸಾದ ಅದಕ್ಕೆ ತತ್ಸಮಾನವಾದ ಶೈಕ್ಷಣಿಕ ಅರ್ಹತೆ ಹೊಂದಿರುವ ಯುವಕ–ಯುವತಿಯರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಕನಿಷ್ಠ 20 ವರ್ಷ ವಯಸ್ಸು ಪೂರೈಸಿರಬೇಕು. ಗರಿಷ್ಠ 25. ಮೀಸಲು ವರ್ಗದವರಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ. ಅರ್ಜಿ ಶುಲ್ಕ ₹200. ಎಸ್‌ಸಿ/ಎಸ್‌ಟಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.

ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ನೇಮಕಾತಿ ನಡೆಯಲಿದೆ. ಕೇಂದ್ರ ಸರ್ಕಾರದ ‘ಗ್ರೂಪ್ ಎ’ ಹಂತದ ವೇತನ ಶ್ರೇಣಿ ಇರಲಿದೆ.

‘ಅಸಿಸ್ಟಂಟ್ ಕಮಾಂಡೆಂಟ್’– ‘ಗ್ರೂಪ್ –ಎ’ ಹುದ್ದೆಗಳ ವಿಂಗಡಣೆ

ಬಿಎಸ್‌ಎಫ್ 108

ಸಿಆರ್‌ಪಿಎಫ್ 106

ಸಿಐಎಸ್‌ಎಫ್ 70

ಎಸ್‌ಎಸ್‌ಬಿ 53

ಐಟಿಬಿಪಿ 12

ಪರೀಕ್ಷೆ ಹೇಗಿರಲಿದೆ?

ಅಸಿಸ್ಟಂಟ್ ಕಮಾಂಡೆಂಟ್ ಗ್ರೂ‍ಪ್ ಎ ಹುದ್ದೆಗಳಿಗೆ ಮೊದಲು ಲಿಖಿತ ಪರೀಕ್ಷೆ ಇರಲಿದೆ. ಇದರಲ್ಲಿ ಎರಡು ಪತ್ರಿಕೆಗಳು ಇರಲಿವೆ ಒಟ್ಟು 600 ಅಂಕಗಳಿಗೆ ಜುಲೈ 19 ಕ್ಕೆ ಒಂದೇ ದಿನ ಪರೀಕ್ಷೆ ನಡೆಯಲಿದೆ.

ಮೊದಲ ಪತ್ರಿಕೆ 250 ಅಂಕಗಳಿಗೆ ಇರಲಿದ್ದು 2 ಗಂಟೆ (ಬೆಳಿಗ್ಗೆ) ಅವಧಿಯದ್ದಾಗಿದೆ. ಇದು ಬಹುಆಯ್ಕೆ ಮಾದರಿಯ ಪ್ರಶ್ನೆಗಳನ್ನು ಹೊಂದಿದ್ದು ನೆಗಟಿವ್ ಅಂಕಗಳು ಇರಲಿವೆ.

ಎರಡನೇ ಪತ್ರಿಕೆ ವಿವರಣಾತ್ಮಕ ಪತ್ರಿಕೆಯಾಗಿರಲಿದೆ. ಇದು 200 ಅಂಕಗಳನ್ನು ಹೊಂದಿದ್ದು 2 ಗಂಟೆ ಸಮಯ ನಿಗದಿಯಾಗಿರುತ್ತದೆ.

ಸಂದರ್ಶನಕ್ಕೆ 150 ಅಂಕಗಳು ಇರಲಿವೆ. ಎರಡೂ ಪತ್ರಿಕೆಗಳಿಗೆ ಕನಿಷ್ಠ ತೇರ್ಗಡೆ ಅಂಕ ಇದೆ. ಇದನ್ನು ಪೂರೈಸದಿದ್ದರೆ ಅಭ್ಯರ್ಥಿಗಳು ಮುಂದಿನ ಹಂತಕ್ಕೆ ಆಯ್ಕೆಯಾಗುವುದಿಲ್ಲ. ಇಂಗ್ಲಿಷ್, ಹಿಂದಿಯಲ್ಲಿ ಪರೀಕ್ಷೆಗಳು ನಡೆಯಲಿವೆ.

ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳು ಮೆರಿಟ್ ಆಧಾರದ ಮೇಲೆ ಮುಂದಿನ ಹಂತಕ್ಕೆ ಹೋಗುತ್ತಾರೆ. ಅಂದರೆ, ದೈಹಿಕ ಸಾಮರ್ಥ್ಯ, ದೈಹಿಕ ಸಹಿಷ್ಣುತೆ ಪರೀಕ್ಷೆ ಎದುರಿಸಬೇಕಾಗುತ್ತದೆ. ನಂತರ ವೈದ್ಯಕೀಯ ಹಾಗೂ ದಾಖಲೆಗಳ ಪರಿಶೀಲನೆ ನಡೆದು ಅಂತಿಮ ಆಯ್ಕೆ ಪಟ್ಟಿ ಹೊರಬೀಳಲಿದೆ.

ಅರ್ಜಿ ಸಲ್ಲಿಸಲು, ವಿವರವಾದ ಅಧಿಸೂಚನೆಗೆ, ಪಠ್ಯಕ್ರಮಕ್ಕೆ ಹಾಗೂ ಹೆಚ್ಚಿನ ಮಾಹಿತಿಗೆ https://upsconline.gov.in/ ಗೆ ಭೇಟಿ ನೀಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.