ADVERTISEMENT

ಉದ್ಯೋಗ ಕಿರಣ: ವರ್ಕ್‌ ಫ್ರಂ ಹೋಮ್‌ ಇಂಟರ್ನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 23:30 IST
Last Updated 22 ಫೆಬ್ರುವರಿ 2026, 23:30 IST
   

ARLaang ಟೆಕ್ನಾಲಜೀಸ್‌: ಈ ಸಂಸ್ಥೆಯು ಮಲಯಾಳ ಭಾಷೆಯಲ್ಲಿ ಪರಿಣತಿ ಇರುವ ಇಂಟರ್ನಿಯನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಮಲಯಾಳ ಹಾಗೂ ಇಂಗ್ಲಿಷ್‌ ಭಾಷೆಗಳಲ್ಲಿ ಮಾತನಾಡುವ ಮತ್ತು ಬರೆಯುವ ಸಾಮರ್ಥ್ಯ ಉಳ್ಳವರು, ಟ್ರಾನ್ಸ್‌ಕ್ರಿಪ್ಷನ್‌, ಟ್ರಾನ್ಸ್‌ಲೇಷನ್‌ನಲ್ಲಿ ಜ್ಞಾನ ಇರುವ ವಿದ್ಯಾರ್ಥಿಗಳು ಮಾರ್ಚ್‌ 20ರ ಒಳಗೆ ಅರ್ಜಿ ಸಲ್ಲಿಸಬಹುದು.

ಸ್ಟೈಪೆಂಡ್‌: ತಿಂಗಳಿಗೆ ₹ 9,000– ₹ 15,000

ಸಂಪರ್ಕ:  https://shorturl.at/V0xgf

ADVERTISEMENT

ಕ್ಯಾನಿಬಾಲ್ಸ್‌ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌: ಡಿಜಿಟಲ್‌ ಮಾರ್ಕೆಟಿಂಗ್‌ ಇಂಟರ್ನಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಡಿಜಿಟಲ್‌ ಮಾರ್ಕೆಟಿಂಗ್‌, ಸೋಷಿಯಲ್‌ ಮೀಡಿಯಾ ಮಾರ್ಕೆಟಿಂಗ್‌ ಬಗ್ಗೆ ಜ್ಞಾನ ಇರುವ, ಇಂಗ್ಲಿಷ್‌ ಭಾಷೆಯಲ್ಲಿ ಬರೆಯುವ ಮತ್ತು ಮಾತನಾಡುವ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳು ಮಾರ್ಚ್‌ 20ರ ಒಳಗೆ ಅರ್ಜಿ ಸಲ್ಲಿಸಬೇಕು.

ಸ್ಟೈಪೆಂಡ್‌: ತಿಂಗಳಿಗೆ ₹ 4,000

ಸಂಪರ್ಕ: https://shorturl.at/L3Qmr

ಬೆಂಗಳೂರು ಕೇಂದ್ರಿತ ಇಂಟರ್ನ್‌ಷಿಪ್‌

ಆ್ಯಂಪಿಸ್‌ (Ampys) ಕನ್‌ಸಲ್ಟಿಂಗ್‌ ಪ್ರೈವೇಟ್‌ ಲಿಮಿಟೆಡ್‌: ಎಐ/ಫುಲ್‌– ಸ್ಟ್ಯಾಕ್‌ ಟೆಕ್‌ ಇಂಟರ್ನಿಗಳನ್ನು ನೇಮಕ ಮಾಡಿಕೊಳ್ಳಲಿದೆ. NET, Angular, C#, Microsoft Azure, MS SQL Server, OpenAI API, Python, and REST API ಬಗ್ಗೆ ಜ್ಞಾನವುಳ್ಳ ವಿದ್ಯಾರ್ಥಿಗಳು ಮಾರ್ಚ್‌ 20ರ ಒಳಗೆ ಅರ್ಜಿ ಸಲ್ಲಿಸಬಹುದು.

ಸ್ಟೈಪೆಂಡ್‌: ತಿಂಗಳಿಗೆ ₹ 5,000– ₹ 10,000.

ಸಂಪರ್ಕ: https://shorturl.at/nCeVz

ದಿ ಸ್ಟಾರ್ಟ್‌ಅಪ್‌ ಝೋನ್‌: ಅಕೌಂಟಿಂಗ್‌ & ಟ್ಯಾಕ್ಸೇಷನ್‌ ಇಂಟರ್ನಿಗಳನ್ನು ಆಹ್ವಾನಿಸಿದೆ. ಎಂಎಸ್‌ ಆಫೀಸ್‌ ಮತ್ತು ಎಂಎಸ್‌ ಎಕ್ಸೆಲ್‌ ಬಗ್ಗೆ ಅರಿತಿರುವ ವಿದ್ಯಾರ್ಥಿಗಳು ಮಾರ್ಚ್‌ 21ರ ಒಳಗೆ ಅರ್ಜಿ ಸಲ್ಲಿಸಬೇಕು.

ಸ್ಟೈಪೆಂಡ್‌: ತಿಂಗಳಿಗೆ ₹ 5,000– ₹ 7,000.

ಸಂಪರ್ಕ: https://shorturl.at/EzqGp

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.