ನಟ ರಾಣಾ, ರಕ್ಷಿತಾ ರಮೇಶ್
ಕನ್ನಡ ಚಿತ್ರರಂಗದ ನಟಿ ರಕ್ಷಿತಾ ಸಹೋದರ ರಾಣಾ ಅವರಿಗೆ ವಿವಾಹದ ಮೊದಲ ವಾರ್ಷಿಕೋತ್ಸವದ ಸಂಭ್ರಮ.
ಈ ಕುರಿತು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡ ನಟ ರಾಣಾ ಅವರು ‘ನಾವಿಬ್ಬರು 7ವರ್ಷಗಳ ಕಾಲ ಸ್ನೇಹಿತರಾಗಿದ್ದೆವು. ಪತಿ, ಪತ್ನಿ ಅಧ್ಯಾಯಕ್ಕೆ ಇದು ಮೊದಲ ವರ್ಷ’ ಎಂಬ ಅಡಿಬರಹ ನೀಡಿದ್ದಾರೆ.
ನಿರ್ದೇಶಕ ಪ್ರೇಮ್ ಹಾಗೂ ರಕ್ಷಿತಾ ಅವರ ಸಮ್ಮುಖದಲ್ಲಿ ರಾಣಾ ಅವರು ತಮ್ಮ ಮನದರಸಿ ರಕ್ಷಿತಾ ರಮೇಶ್ ಅವರ ಜತೆ, 2025ರ ಫೆ.7ರಂದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರ ವಿವಾಹಕ್ಕೆ ಅನೇಕ ತಾರೆಯರು ಆಗಮಿಸಿ ಶುಭಕೋರಿದ್ದರು.
ರಾಣಾ ಪತ್ನಿ ರಕ್ಷಿತಾ ರಮೇಶ್ ಅವರು ಫ್ಯಾಷನ್ ಡಿಸೈನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನ್ಯೂಯಾರ್ಕ್‌ನಲ್ಲಿ ನಟನೆ ತರಬೇತಿ ಪಡೆದಿರುವ ರಾಣಾ ಅವರು, ‘ಏಕ್ ಲವ್ ಯಾ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈ ಚಿತ್ರವನ್ನು ಪ್ರೇಮ್ ಅವರು ನಿರ್ದೇಶನ ಮಾಡಿದ್ದು, ಸಹೋದರಿ ರಕ್ಷಿತಾ ಅವರು ನಿರ್ಮಾಣ ಮಾಡಿದ್ದಾರೆ.
ಇತ್ತೀಚೆಗೆ ಬಿಡುಗಡೆಗೊಂಡ ‘ಏಳುಮಲೆ’ ಚಿತ್ರದಲ್ಲಿ ರಾಣಾ ಅವರು ಹರೀಶ್ ಎಂಬ ಪಾತ್ರದ ಮೂಲಕ ಗಮನ ಸೆಳೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.