ADVERTISEMENT

ರಣಬೀರ್‌ ತೋಳಿನಲ್ಲಿ ಆಲಿಯಾ; ಮದುವೆ ನಂತರ ಮೊದಲ ಸಲ ಕಾಣಿಸಿಕೊಂಡ ಜೋಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಏಪ್ರಿಲ್ 2022, 15:01 IST
Last Updated 14 ಏಪ್ರಿಲ್ 2022, 15:01 IST
 ರಣಬೀರ್‌ ಕಪೂರ್‌ ಮತ್ತು ಆಲಿಯಾ ಭಟ್‌
ರಣಬೀರ್‌ ಕಪೂರ್‌ ಮತ್ತು ಆಲಿಯಾ ಭಟ್‌    

ಮುಂಬೈ: ಬಾಲಿವುಡ್‌ನ ಸ್ಟಾರ್‌ ದಂಪತಿ ರಣಬೀರ್‌ ಕಪೂರ್‌ ಮತ್ತು ಆಲಿಯಾ ಭಟ್‌ ಮದುವೆಯ ನಂತರ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು.

ಬಾಂದ್ರಾದಲ್ಲಿರುವ ರಣಬೀರ್‌ ಅವರ 'ವಾಸ್ತು' ನಿವಾಸದಲ್ಲಿ ಕುಟುಂಬದ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಮದುವೆ ಸಮಾರಂಭ ನೆರವೇರಿದೆ. ಆಲಿಯಾ ಮತ್ತು ರಣಬೀರ್‌ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುವುದಕ್ಕೂ ಮುನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಮದುವೆಯ ಚಿತ್ರಗಳನ್ನು ಹಂಚಿಕೊಂಡಿದ್ದರು.

ಮದುವೆ ಸಮಾರಂಭದಲ್ಲಿ ಧರಿಸಿದ್ದ ಉಡುಪಿನಲ್ಲಿಯೇ ಕಾಣಿಸಿಕೊಂಡ ಜೋಡಿ ಮಾಧ್ಯಮಗಳತ್ತ ಕೈಬೀಸಿ ನಗೆ ಬೀರಿದರು. ಹೊರಡುವ ಮುನ್ನ ರಣಬೀರ್‌, ಆಲಿಯಾ ಅವರನ್ನು ತೋಳುಗಳಲ್ಲಿ ಹೊತ್ತು ಸಾಗಿದರು.

ADVERTISEMENT

ಮದುವೆ ಚಿತ್ರಗಳೊಂದಿಗೆ ಆಲಿಯಾ, ಪ್ರಿಯಕರನೊಂದಿಗೆ ಐದು ವರ್ಷಗಳ ಪಯಣ, ಪ್ರೀತಿ ಹಾಗೂ ನೆನಪುಗಳ ಜೊತೆಗೆ ಮದುವೆಯ ಖುಷಿಯನ್ನು ಹಂಚಿಕೊಂಡಿದ್ದಾರೆ.

'ಮನೆಯಲ್ಲಿ...ನಮ್ಮ ನೆಚ್ಚಿನ ತಾಣ–ಬಾಲ್ಕನಿಯಲ್ಲಿ ನಾವು ನಮ್ಮ 5 ವರ್ಷಗಳ ಬಾಂಧವ್ಯವನ್ನು ಕಳೆದಿದ್ದೇವೆ. ಇಂದು, ನೆರದಿದ್ದ ಕುಟುಂಬದ ಸದಸ್ಯರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ನಾವು ಮದುವೆಯಾಗಿದ್ದೇವೆ.

ಈಗಾಗಲೇ ಬೆರೆತಿರುವ ನೆನಪುಗಳ ಜೊತೆಗೆ ಇನ್ನಷ್ಟನ್ನು ಸೇರಿಸಲು ಕಾತುರರಾಗಿದ್ದೇವೆ... ಪ್ರೀತಿ, ನಗು, ಮೌನಗಳು, ರಾತ್ರಿ ನೋಡಿದ ಸಿನಿಮಾಗಳು, ಸುಮ್ಮನೆ ಎದುರಾದ ಜಗಳಗಳು, ವೈನ್ ಮತ್ತು ಚೈನೀಸ್‌ ತಿನಿಸುಗಳು ಸೇರಿ ಹಲವು ಸಂಗತಿಗಳು ನೆನಪುಗಳಲ್ಲಿ ಜೊತೆಯಾಗಿವೆ.

ಇಂಥ ಪ್ರಮುಖ ಸಮಯದಲ್ಲಿ ಪ್ರೀತಿ ತೋರಿದ ಎಲ್ಲರಿಗೂ ಧನ್ಯವಾದ....' ಎಂದು ಆಲಿಯಾ ಪ್ರಕಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.