ADVERTISEMENT

‘ಸ್ಪಿರಿಟ್‌’ ಬೆನ್ನಲ್ಲೇ ‘ಕಲ್ಕಿ 2898ಎಡಿ’ ಚಿತ್ರದ ಸೀಕ್ವೆಲ್‌ನಿಂದ ದೀಪಿಕಾ ಔಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಸೆಪ್ಟೆಂಬರ್ 2025, 8:21 IST
Last Updated 18 ಸೆಪ್ಟೆಂಬರ್ 2025, 8:21 IST
   

ಮುಂಬೈ: ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ, ಪ್ರಭಾಸ್ ನಟನೆಯ ‘ಸ್ಪಿರಿಟ್’ ಚಿತ್ರದಿಂದ ಹೊರಬಿದ್ದ ಬೆನ್ನಲ್ಲೇ ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ, ‘ಕಲ್ಕಿ 2898ಎಡಿ’ ಸೀಕ್ವೆಲ್‌ನಿಂದಲೂ ಹೊರನಡೆದಿದ್ದಾರೆ.

ಈ ಬಗ್ಗೆ ನಿರ್ಮಾಣ ಸಂಸ್ಥೇ ‘ವೈಜಯಂತಿ ಮೂವೀಸ್‌’ ಮಾಹಿತಿ ಹಂಚಿಕೊಂಡಿದೆ.

‘‘ಕಲ್ಕಿ 2898ಎಡಿ’ ಸೀಕ್ವೆಲ್‌ನಲ್ಲಿ ದೀಪಿಕಾ ಪಡುಕೋಣೆ ಅವರು ಅಭಿನಯಿಸುತ್ತಿಲ್ಲ. ಹಲವು ಸುತ್ತಿನ ಮಾತುಕತೆಗಳ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಎಕ್ಸ್‌ನಲ್ಲಿ ತಿಳಿಸಿದೆ.

ADVERTISEMENT

‘ಕಲ್ಕಿ ಅಂತಹ ದೊಡ್ಡಮಟ್ಟದ ಚಿತ್ರಕ್ಕೆ ಹೆಚ್ಚಿನ ಬದ್ಧತೆ ಉಳ್ಳವರ ಅಗತ್ಯವಿದೆ’ ಎಂದು ಹೇಳಿದೆ.

ಈ ಕುರಿತು ದೀಪಿಕಾ ಪಡುಕೋಣೆ ಅವರು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದೇ ಜೂನ್‌ 27ರಂದು ಬಿಡುಗಡೆಯಾಗಿದ್ದ ‘ಕಲ್ಕಿ’ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾ ಒಟ್ಟು 6 ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಚಿತ್ರದಲ್ಲಿ ಪ್ರಭಾಸ್‌, ದೀಪಿಕಾ ಪಡುಕೋಣೆ, ಅಮಿತಾಭ್‌ ಬಚ್ಚನ್‌, ಕಮಲ್‌ ಹಾಸನ್‌ ಸೇರಿದಂತೆ ದಿಶಾ ಪಟಾನಿ, ಶಾಶ್ವತ ಚಟರ್ಜಿ ಹಾಗೂ ಶೋಭಾನ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು.

ವಂಗಾ ನಿರ್ದೇಶನದ ಪ್ರಭಾಸ್ ಮುಂದಿನ ಸಿನಿಮಾ ‘ಸ್ಪಿರಿಟ್‌’ಗೂ ನಾಯಕಿಯಾಗಿ ದೀಪಿಕಾ ಪಡುಕೋಣೆ ಆಯ್ಕೆಯಾಗಿದ್ದರು. ಚಿತ್ರೀಕರಣ ಪ್ರಾರಂಭಕ್ಕೂ ಮೊದಲು ವಂಗಾ ಮತ್ತು ದೀಪಿಕಾ ನಡುವೆ ವೈಮನಸ್ಸು ಮೂಡಿದ್ದರಿಂದ ದೀಪಿಕಾ ಸ್ಥಾನಕ್ಕೆ ತೃಪ್ತಿ ಡಿಮ್ರಿ ಅವರನ್ನು ಚಿತ್ರತಂಡ ಆಯ್ಕೆ ಮಾಡಿತ್ತು.

ದೀಪಿಕಾ ಅವರ ಮೇಲೆ ಕಥೆ ಬಹಿರಂಗ ಪಡಿಸಿದ ಆರೋಪವನ್ನು ವಂಗಾ ಮಾಡಿದ್ದರು.

ಇದರೊಂದಿಗೆ ಪ್ರಭಾಸ್‌ ನಟನೆಯ ಮತ್ತೊಂದು ಚಿತ್ರದಿಂದಲೂ ದೀಪಿಕಾ ಪಡುಕೋಣೆ ಹೊರನಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.