
ಕುಟುಂಬದ ಜೊತೆ ನಟಿ ಮಾಲಾಶ್ರೀ ರಾಮ್
ಕೃಪೆ: ಇನ್‌ಸ್ಟಾಗ್ರಾಂ
ಕುಟುಂಬದೊಂದಿಗೆ ನಟಿ ಮಾಲಾಶ್ರೀ ರಾಮ್ ಅವರು ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಮಾಲಾಶ್ರೀ ಪುತ್ರಿ ನಟಿ ಆರಾಧಾನ ಅವರು ದೀಪ ಹಚ್ಚಿ ಪ್ರಾರ್ಥಿಸಿದ್ದಾರೆ.
ಚಿತ್ರಗಳನ್ನು ಹಂಚಿಕೊಂಡ ಆರಾಧಾನ ಅವರು, ‘ನನ್ನನ್ನು ಖುಷಿಯಾಗಿ ಇಡುವ ಜನರ ಜೊತೆ ನನ್ನ ನೆಚ್ಚಿನ ತಾಣದಲ್ಲಿ’ ಎಂದು ಅಡಿಬರಹ ನೀಡಿದ್ದಾರೆ.
ಸಿಹಿ ಮುತ್ತು ನೀಡಿ ಮಗಳ ಹುಟ್ಟುಹಬ್ಬಕ್ಕೆ ಮಾಲಾಶ್ರೀ ಅವರು ಶುಭಕೋರಿದ್ದಾರೆ.
ಮಾಲಾಶ್ರೀ ರಾಮ್ ಅವರು, ‘ರಾಮಾಚಾರಿ’, ‘ದುರ್ಗಿ’, ‘ಕಿರಣ್ ಬೇಡಿ’, ‘ನಂಜುಡಿ ಕಲ್ಯಾಣ’ ಸೇರಿ ಅನೇಕ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.
ಆರಾಧಾನ ಅವರು ‘ಕಾಟೇರಾ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.
ಸದ್ಯ, ಆರಾಧಾನ ಮುಂಬರುವ ‘ನೆಕ್ಸ್ಟ್‌ಲೆವೆಲ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.